ಸಿಐಡಿ ಎಸ್‌ಪಿ ಆಗಿದ್ದ ರವಿ ಡಿ. ಚನ್ನಣ್ಣನವರ್ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ಎಂಡಿಯಾಗಿ ವರ್ಗಾವಣೆಗೊಂಡಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ರವಿ ಡಿ. ಚನ್ನಣ್ಣನವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಸಿಐಡಿ ಎಸ್‌ಪಿ ಆಗಿದ್ದ ರವಿ ಡಿ. ಚನ್ನಣ್ಣನವರ್ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಎಂಡಿಯಾಗಿ ವರ್ಗಾವಣೆಗೊಂಡಿದ್ದಾರೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ರವಿ ಚನ್ನಣ್ಣನವರ್ ನೇಮಕವಾಗಿದ್ದಾರೆ. 2 ದಿನಗಳ ಹಿಂದಷ್ಟೇ 19 ಉನ್ನತ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಬಸವರಾಜ ಬೊಮ್ಮಾಯಿ ಸರ್ಕಾರ ಇದೀಗ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಆದೇಶ ಹೊರಡಿಸಿದೆ.
ಉಳಿದಂತೆ ಭೀಮಾಶಂಕರ ಗುಳೇದ್- ಡಿಸಿಪಿ, ಬೆಂಗಳೂರು ಪೂರ್ವ, ಡಿ. ಕಿಶೋರ್ ಬಾಬು- ಬೀದರ್ ಪೊಲೀಸ್ ವರಿಷ್ಠಾಧಿಕಾರಿ, ಅರುಣಾಂಗ್ಶು ಗಿರಿ- ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ, ಡಿ.ಎಲ್. ನಾಗೇಶ್- ಸಿಐಡಿ ಎಸ್‌ಪಿ, ಅಬ್ದುಲ್ ಅಹಾದ್- ಕೆಎಸ್‌ಆರ್‌ಟಿಸಿ ನಿರ್ದೇಶಕ, ಟಿ. ಶ್ರೀಧರ್- ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್‌ಪಿ, ಟಿ.ಪಿ. ಶಿವಕುಮಾರ್- ಚಾಮರಾಜನಗರ ಎಸ್‌ಪಿ ಹಾಗೂ ದಿವ್ಯಸಾರ ಥಾಮಸ್- ಪೊಲೀಸ್ ಅಕಾಡೆಮಿ ಉಪ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ.
ಸಿಐಡಿ ಎಸ್‌ಪಿ ಹುದ್ದೆಯಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಶಡ್ಯೂಲ್ ಟ್ರೈಬ್ ಡೆವಲಪ್ಮೆಂಟ್ ಕಾರ್ಪೊರೇಷನ್ ಎಂಡಿ ಆಗಿ ರವಿ ಡಿ. ಚನ್ನಣ್ಣನವರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಸಿಐಡಿ ಎಸ್ಪಿಯಾಗಿದ್ದ ಐಪಿಎಸ್ ಅಧಿಕಾರಿ ಭೀಮಾಶಂಕರ ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಅಗಿ ವರ್ಗಾವಣೆ ಮಾಡಲಾಗಿದೆ. ಅಬ್ದುಲ್ ಅಹಾದ್ ಅವರನ್ನು ಎಸಿಬಿ ಎಸ್ಪಿಯಿಂದ ಕೆಎಸ್‌ಆರ್‌ಟಿಸಿ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಟಿ ಶ್ರೀಧರ್ ಅವರನ್ನು ಕೊಪ್ಪಳ ಎಸ್‌ಪಿ ಹುದ್ದೆಯಿಂದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿಯಾಗಿ ವರ್ಗಾಯಿಸಲಾಗಿದೆ.
ಟಿ.ಪಿ ಶಿವಕುಮಾರ್ ಅವರನ್ನು ಬಂಧೀಖಾನೆ ಎಸ್ಪಿಯಿಂದ ಚಾಮರಾಜನಗರ ಎಸ್ಪಿಯಾಗಿ, ದಿವ್ಯಸಾರ ಥಾಮಸ್ ಅವರನ್ನು ಚಾಮರಾಜನಗರ ಎಸ್ಪಿಯಿಂದ ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕರಾಗಿ, ಡೆಕ್ಕಾ ಕಿಶೋರ್ ಬಾಬು ಅವರನ್ನು ಬೀದರ್ ಎಸ್‌ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಅರುಣಾಂಗ್ಶು ಗಿರಿ ಅವರನ್ನು ಎಸಿಬಿ ಎಸ್ ಪಿಯಿಂದ ಕೊಪ್ಪಳ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಡಿ.ಎಲ್. ನಾಗೇಶ್ ಅವರನ್ನು ಬೀದರ್ ಎಸ್ಪಿಯಿಂದ ಸಿಐಡಿ ಎಸ್‌ಪಿ ಆಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.