ಪುತ್ತೂರಿನ ಓರ್ವ ನಿಷ್ಠಾವಂತ ಕಾಂಗ್ರಸ್ ಮುಂದಾಳುಗಳಾಗಿದ್ದು ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿ ಕೊಂಡವರಾಗಿರುತ್ತಾರೆ , ಒಂದು ಕಾಲದ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದ ದಿವಂಗತ ದೇರಣ್ಣ ಆಳ್ವ ರವರ ಸುಪುತ್ರರಾಗಿರುವ ಶಿವರಾಮ ಆಳ್ವರವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಪುತ್ತೂರು ಶಾಸಕರಾಗಿದ್ದ ಶ್ರೀ ವಿನಯ ಕುಮಾರ್ ಸೊರಕೆಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಪುತ್ತೂರು NSUI ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಸಂಘಟಣೆಯಲ್ಲಿ ತೊಡಗಿಸಿ ಕೊಂಡವರಾಗಿದ್ದರು.
Advertisement
Advertisement
Advertisement
Advertisement
ಮಾಜಿ ಸಚಿವರುಗಳಾದ ರಮಾನಾಥ್ ರೈ, ವಿನಯ ಕುಮಾರ್ ಸೊರಕೆ,ಯು ಟಿ ಖಾದರ್, ಅಭಯಚಂದ್ರ ಜೈನ್, ಶ್ರೀಮತಿ ಶಕುಂತಲಾ ಟಿ ಶೆಟ್ಟಿ,,ಯುವ ಮುಖಂಡ ಮಿಥುನ್ ರೈ ಆದಿಯಾಗಿ ಬಹುತೇಕ ಎಲ್ಲಾ ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಭಾದವ್ಯ ಉಳಿಸಿಕೊಂಡಿರುವ ಶಿವರಾಮ ಆಳ್ವ ರವರು ಓರ್ವ ಕೊಡುಗೈ ದಾನಿಯಾಗಿರುತ್ತಾರೆ , ಶ್ರೀ ಬಿ. ಶಿವರಾಮ ಆಳ್ವ ಅವರು ಜನವರಿ 26 ರಂದು ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಪುತ್ತೂರಿನ ಬಿರುಮಲೆಯಲ್ಲಿರುವ ಮಾನಸಿಕ ವಿಕಲ ಚೇತನರ ವ್ರತ್ತಿ ತರಬೇತಿ ಮತ್ತು ಪುರ್ನವಸತಿ ಕೇಂದ್ರವಾದ “ಪ್ರಜ್ಞಾ ಆಶ್ರಮ” ದಲ್ಲಿ ಹಾಗೂ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸರಳವಾಗಿ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಅವರು ವಿಕಲ ಚೇತನ ಪ್ರತಿಭೆಗಳೊಂದಿಗೆ ಉಪಹಾರ ಸೇವಿಸಿ ಆಶ್ರಮ ವಾಸಿಗಳಿಂದ ಆಶೀರ್ವಾದ ಪಡೆದರು,ಅಂದೇ ಬೆಳಿಗ್ಗೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ತನ್ನ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ, ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ :ರಾಜರಾಮ್, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ,ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಜಿಲ್ಲಾ ಸಹಕಾರಿ ಯೂನಿಯನಿನ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ಅರಸ್, ಮಾಜಿ ನಗರ ಸಭಾ ಅಧ್ಯಕ್ಷೆ ಜಯಂತಿ ಬಲ್ನಾಡ್, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶುಕೂರ್ ಹಾಜಿ, ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಹಿಂದುಳಿದ ವರ್ಗದ ಅಧ್ಯಕ್ಷ ಹರೀಶ್ ಕೋಟ್ಯಾನ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕೇರೇನಸ್, ಬ್ಲಾಕ್ ಪ್ರದಾನ ಕಾರ್ಯದರ್ಶಿ ಗಳಾದ ಅಮಲ ರಾಮಚಂದ್ರ, ನ್ಯಾಯವಾದಿ ಭಾಸ್ಕರ್ ಗೌಡ ಕೊಡಿOಬಾಲ, ಪೂರ್ಣೇಶ್ ಭಂಡಾರಿ, ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ, ಆರ್ಯಾಪು ವಲಯ ಅಧ್ಯಕ್ಷ ಪ್ರಜ್ವಲ್ ರೈ,ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಸೂಫಿ ಬಪ್ಪಳಿಗೆ, ಪ್ರದಾನ ಕಾರ್ಯದರ್ಶಿ ಯೂಸುಫ್ ಸಾಲ್ಮರ, ನಗರ ಸಭಾ ಸದಸ್ಯರಾದ ರಿಯಾಜ್ ಪರ್ಲಡ್ಕ, ಇಸುಬು ಕೆ,ಬ್ಲಾಕ್ ಕಾರ್ಯದರ್ಶಿ ಅಬೀಬ್ ಕಣ್ಣೂರು, ಅಸಂಗಟಿತ ಕಾರ್ಮಿಕ ಘಟಕದ ಅಧ್ಯಕ್ಷ ಮೇಲ್ವಿನ್ ಮೊಂತೆರೊ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಕೆಮ್ಮಾರ , ಪ್ರದಾನ ಕಾರ್ಯದರ್ಶಿ ಸನದ್ ಯೂಸುಫ್, ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸಾಯಿರ ಝುಬೈರ್, ಕಿಸಾನ್ ಘಟಕದ ಅಧ್ಯಕ್ಷ ಮುರಳೀಧರ ಗೌಡ ಕೆಮ್ಮಾರ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು