ಕಡಬ: ದರ್ಗಾದ ಬೀಗ ಮುರಿದು ಒಳನುಗ್ಗಿ ದರ್ಗಾದ ಒಳಗಿದ್ದ ಹಣವನ್ನು ಕಳ್ಳರು ಕದ್ದೊಯ್ದ ಘಟನೆ ಮರ್ದಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ನಡೆದಿದೆ.
ಜ.30 ರಂದು ರಾತ್ರಿ 3 ಗಂಟೆ ಸುಮಾರಿಗೆ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಕಳ್ಳರು ದರ್ಗಾದ ಬೀಗ ಮುರಿದು ಒಳನುಗ್ಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದರ್ಗಾದ ಕಬ್ಬಿಣದ ಬಾಗಿಲಿಗೆ 2 ಬೀಗಗಳನ್ನು ಹಾಕಲಾಗಿದ್ದು, ಒಂದು ಬೀಗವನ್ನು ಮುರಿದ ಕಳ್ಳರು, ಎರಡನೇ ಬೀಗವನ್ನು ಮುರಿಯಲಾಗದ ಹಿನ್ನೆಲೆ ಬಾಗಿಲಿನ ಚಿಲಕವನ್ನೇ ಮುರಿದಿದ್ದು, ಸುಮಾರು 30 ಸಾವಿರಕ್ಕೂ ಹೆಚ್ಚಿನ ಹಣವನ್ನು ಕಳವುಗೈದಿದ್ದಾರೆ ಎನ್ನಲಾಗಿದೆ.