ಪುತ್ತೂರು: ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ-1 ಮತ್ತು ಸಹಾಯಕಿ -9 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸವಣೂರು ಗ್ರಾಮದ ಸವಣೂರು ಅಂಗನವಾಡಿ ಕಾರ್ಯಕರ್ತೆ ಒಂದು ಹುದ್ದೆ , ಆಲಂಕಾರು ಗ್ರಾಮದ ಬುಡೇರಿಯಾ, ಪೆರಾಬೆ ಗ್ರಾಮದ ಮನವಳಿಕೆ-2, ಕೊಡಿಪ್ಪಾಡಿ ಗ್ರಾಮದ ಕೊಡಿಪ್ಪಾಡಿ ಶಾಲೆ, ಒಳಮೊಗ್ಗು
ಗ್ರಾಮದ ಕುಟಿನೋಪಿನಡ್ಕ, ಕಸಬಾ ಗ್ರಾಮದ ಕೂರ್ನಡ್ಕ -2, ಕೆದಂಬಾಡಿ ಗ್ರಾಮದ ಇಡಿ, ಕೊಣಾಜೆ ಗ್ರಾಮದ ಕೋನಡ್ಕ , ಕೆಮ್ಮಿಂಜೆ ಗ್ರಾಮದ ನೈತ್ತಾಡಿ, 102ನೇ ನೆಕ್ಕಿಲಾಡಿ ಗ್ರಾಮದ ನಡುಮಜಲು ಅಂಗನವಾಡಿಗಳ
ಒಟ್ಟು ಒಂಭತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
www.anganawadrecrut.kar.nic.in ವೆಬ್‌ಸೈಟ್ ಮೂಲಕ ಫೆ.28ರ ಒಳಗೆ ಅರ್ಜಿ ಸಲ್ಲಿಸಬಹುದು ಎಂದು ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು ತಿಳಿಸಿದ್ದಾರೆ.