ವಿಟ್ಲ: ಪುತ್ತೂರು ರಸ್ತೆಯ ಚಂದಳಿಕೆ ಎಂಬಲ್ಲಿ ಗ್ಯಾರೇಜ್ ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸಂಪೂರ್ಣವಾಗಿ ನಾಶ ಹೊಂದಿದ ಘಟನೆ ನಡೆದಿದೆ.
ಮೇಗಿನಪೇಟೆ ನಿವಾಸಿ ಹರೀಶ್ ಆಚಾರ್ಯರವರಿಗೆ ಸೇರಿದ ಕಾರು ಗ್ಯಾರೇಜ್ ಗೆ ಬೆಂಕಿ ತಗುಲಿದೆ. ಗ್ಯಾರೇಜ್ ನಲ್ಲಿ ಕೆಲಸಕ್ಕೆ ಬಂದಿದ್ದ ಕಾರುಗಳನ್ನು ಕೆಲಸಗಾರು ಸ್ಥಳೀಯರೊಂದಿಗೆ ಸೇರಿ ಹೊರತೆಗೆದಿದ್ದಾರೆ. ಒಂದು ಕಾರು ಬಾಕಿಯಾಗಿತ್ತು ಎನ್ನಲಾಗಿದೆ. ಬೆಂಕಿ ತಗುಲಿದ ಬಗ್ಗೆ ಮಾಹಿತಿ ಅರಿತ ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರೊಂದಿಗೆ ಸೇರಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ. ಘಟನೆಯಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ.