ವಿಟ್ಲ: ಕೇಪು- ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 31 ವರ್ಷಗಳ ಕಾಲ ಶುಶ್ರೂಷಾಧಿಕಾರಿಯಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ಇದೀಗ ನಿವೃತ್ತಿಗೊಳ್ಳುತ್ತಿರುವ ಕೆ. ರತಿದೇವಿ ರವರಿಗೆ ಬೀಳ್ಕೊಡುಗೆ ಸಮಾರಂಭ ಮಾಡಲಾಯಿತು.
ಕೆ. ಮಾಧವ ರವರ ಪತ್ನಿಯಾದ ಕೆ. ರತಿದೇವಿ ರವರು 31-6-1991 ರಲ್ಲಿ ಕೇಪು- ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಪ್ರಾರಂಭಿಸಿದ್ದು, ಅದಕ್ಕಿಂತ ಮೊದಲು ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ರತಿದೇವಿ ರವರು ಕೇಪು- ಅಡ್ಯನಡ್ಕ ಭಾಗದ ಜನರಿಗೆ ಬಹಳ ಅಚ್ಚು-ಮೆಚ್ಚಿನ ಶುಶ್ರೂಷಾಧಿಕಾರಿಯಾಗಿ ಗುರುತಿಸಿಕೊಂಡಿದ್ದು, ಆ ಭಾಗದ ಜನರ ಮನೆ ಮಗಳಂತಿದ್ದರು. ಆ ಭಾಗದ ಎಲ್ಲಾ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದು, ಬಹಳ ಕಾಳಜಿಯಿಂದ ಶುಶ್ರೂಷೆ ಮಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವೇಶ್ವರ ವಿ. ಕೆ, ಪ್ರಭಾರ ತಾಲೂಕು ಆರೋಗ್ಯ ಅಧಿಕಾರಿ ಡಾ. ಜಯಪ್ರಕಾಶ್, ಕೇಪು ಪಂಚಾಯತ್ ಅಧ್ಯಕ್ಷರಾದ ಯಶಸ್ವಿನಿ ಶಾಸ್ತ್ರೀ, ಕೇಪು ಪಂಚಾಯತ್ ಉಪಾಧ್ಯಕ್ಷರಾದ ರಾಘವ, ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂದಿನ ವೈದ್ಯಾಧಿಕಾರಿ ಡಾ. ಸುಬೋಧ್ ಕುಮಾರ್ ರೈ, ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಬಿ.ಬಿ. ಗಿರಿಜ, ಗ್ರಾಮ ಪಂಚಾಯತ್ ಸದಸ್ಯರಾದ ಜಗಜ್ಜೀವನ್ ಶೆಟ್ಟಿ, ಅಬ್ದುಲ್ ಕರೀಂ, ಹಾಗೂ ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.