ರಾಜ್ಯ ಹೈಕೋರ್ಟ್‌ನಲ್ಲಿ ನಿನ್ನೆಯಿಂದ ವಿಚಾರಣೆ ನಡೆಯುತ್ತಿದ್ದ ಹಿಜಾಬ್ ವಿವಾದವನ್ನು ವಿಸ್ತ್ರತ ಪೀಠಕ್ಕೆ ವರ್ಗಾವಣೆ ಮಾಡಿ ನ್ಯಾಯಾಲಯ ಆದೇಶಿಸಿದೆ.
ಈ ಕುರಿತಂತೆ ಪ್ರಕರಣವನ್ನು ವಿಸ್ತ್ರತ ಪೀಠಕ್ಕೆ ವರ್ಗಾವಣೆಮಾಡಿರುವ ಹಿರಿಯ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್,ಪ್ರಕರಣದಲ್ಲಿ ಹಲವು ವಿಚಾರಗಳು ಗೊಂದಲದಲ್ಲಿವೆ. ಹಲವುಪ್ರಶ್ನೆಗಳು ಎದ್ದಿವೆ. ಹೀಗಾಗಿ, ಹೆಚ್ಚಿನ ವಿಚಾರಣೆಯ ಅಗತ್ಯವಿದೆ.ಈ ಹಿನ್ನೆಲೆಯಲ್ಲಿ ವಿಸ್ತ್ರತ ಪೀಠಕ್ಕೆ ಇದನ್ನು ವರ್ಗಾಯಿಸಲುಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸುತ್ತಿದ್ದೇನೆ ಎಂದರು.
ಅರ್ಜಿದಾರರ ಪರ ವಕೀಲರು ಮಂಡಿಸಿದ ವಾದವೇನು..?
ಪರೀಕ್ಷಾ ಸಮಯವಾದ್ದರಿಂದ ಶಾಲೆಗಳು ಎಂದಿನಂತೆ ನಡೆಯಬೇಕಿದೆ. ಯಥಾಸ್ಥಿತಿ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಈಗ ಹೇಗಿದೆಯೋ ಹಾಗೆಯೇ ಬಿಟ್ಟುಬಿಡಿ. ಎರಡು ತಿಂಗಳು ಈಗಿನಂತೆಯೇ ಬಿಟ್ಟರೆ ಆಕಾಶವೇನೂ ಕಳಚಿ ಬೀಳುವುದಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದಸಮವಸ್ತ್ರದ ಕುರಿತಾಗಿ ನೋಡಿಕೊಳ್ಳಬಹುದು. ಸದ್ಯ ಕಡೆಯಪಕ್ಷ ೨ ತಿಂಗಳಿಗೆ ಮಧ್ಯಂತರ ಆದೇಶ ನೀಡಿ ಎಂದು ಅರ್ಜಿದಾರರ ಪರ ವಕೀಲ ಹೆಗಡೆ ವಾದಿಸಿದ್ದಾರೆ.ಅಲ್ಲದೇ, ಮುಂಬೈ, ಮದ್ರಾಸ್ ಹಾಗೂ ಕೇರಳನ್ಯಾಯಾಲಯಗಳು ನೀಡಿದ ತೀರ್ಪನ್ನು ಉಲ್ಲೇಖಿಸಿ ವಾದ ಮಂಡಿಸಿದ್ದಾರೆ.
ಇನ್ನು, ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಮತ್ತೊಬ್ಬ ವಕೀಲ ದೇವದತ್ ಕಾಮತ್, ಪ್ರಕರಣ ವಿಸೃತ ಪೀಠಕ್ಕೆ ಹೋಗಲಿ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬರಲು ಅನುಮತಿ ನೀಡಿ. ನಮಗೆ ಕೋರ್ಟ್ ಮೇಲೆ ನಂಬಿಕೆಇದೆ ಎಂದು ವಾದ ಮಂಡಿಸಿದ್ದಾರೆ.ಇನ್ನು, ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವಕೇಟ್ಜನರಲ್ ನಾವದಗಿ ಅವರು, ಈ ವಿಚಾರ ರಾಜ್ಯದ ಕಾನೂನುಸುವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಈ ಉದ್ದೇಶದಿಂದಆದಷ್ಟು ಶೀಘ್ರ ನ್ಯಾಯಾಲಯ ತೀರ್ಮಾನ ಘೋಷಿಸುವುದು ಉತ್ತಮ. ವಿಸ್ತ್ರತ ಪೀಠಕ್ಕೆ ವರ್ಗಾಯಿಸುವುದಾದರೆಸರ್ಕಾರದ್ದೇನೂ ಅಭ್ಯಂತರವಿಲ್ಲ ಎಂದಿದ್ದಾರೆ.ಅಲ್ಲದೇ ಪ್ರಮುಖವಾಗಿ, ಇಲ್ಲಿ ಸಮವಸ್ತ್ರದ ಕುರಿತಾಗಿ ರಾಜ್ಯಸರ್ಕಾರದ ಆದೇಶವನ್ನೇ ಈ ವಿದ್ಯಾರ್ಥಿನಿಯರು ಪ್ರಶ್ನಿಸಿದ್ದಾರೆ.ಇವರ ಅರ್ಜಿಯಲ್ಲೇ ತಪ್ಪಿದೆ. ಕಾಲೇಜಿನ ಸಮವಸ್ತ್ರ ನೀತಿಯನ್ನುಮಕ್ಕಳು ಶಾಲಾ-ಕಾಲೇಜಿಗೆ ಬರಲಿ, ಪಾಠ ಕೇಳಲಿ. ಈ ಬಗ್ಗೆಶಾಲಾ ಆಡಳಿತ ಮಂಡಳಿಗಳಿಗೆ ಸ್ವಾಯತ್ತತೆ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.
ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗವಲ್ಲ ಎಂದು ಹಲವುನ್ಯಾಯಾಲಯದ ತೀರ್ಪುಗಳು ಹೇಳಿವೆ. ಇಂತಹ ಸಂದರ್ಭದಲ್ಲಿತರಗತಿಯಲ್ಲಿ ಹಿಜಾಬ್ ಹಾಕುತ್ತೇವೆ ಎನ್ನುವುದು ಪೂರ್ವಾಗ್ರಹಪೀಡಿತದಿಂದ ಕೂಡಿದೆ ಎಂದು ವಾದ ಮಂಡಿಸಿದರು.ಶಾಲೆಗಳನ್ನು ಎಂದಿನಿಂದ ಆರಂಭ ಮಾಡುತ್ತೀರಿ ಎಂದುನ್ಯಾಯಮೂರ್ತಿಗಳು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಅಡ್ವಕೇಟ್ ಜನರಲ್ ಅವರು, ಸೋಮವಾರದಿಂದ ಶಾಲೆಗಳನ್ನು ಆರಂಭಿಸುತ್ತೇವೆ ಎಂದು ಮಾಹಿತಿ ನೀಡಿದರು.ಇನ್ನು ಆಡಳಿತ ಮಂಡಳಿಗಳ ಪರವಾಗಿ ವಾದ ಮಂಡಿಸಿದವಕೀಲ ಸಜನ್ ಪೂವಯ್ಯ, ಸಮವಸ್ತ್ರದ ಕುರಿತಾಗಿ ಆಡಳಿತಮಂಡಳಿ ಪ್ರತಿ ವರ್ಷ ಸಭೆ ನಡೆಸಿ, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸಮವಸ್ತ್ರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿರುತ್ತದೆ.ಈಗಿನ ಸಮವಸ್ತ್ರ ಹೇಗಿರಬೇಕು ಎಂಬುದು ಕಳೆದ ವರ್ಷವೇ ನಿರ್ಧಾರವಾಗಿದೆ.
ಈ ವರ್ಷವೂ ಅದನ್ನೇ ಪಾಲಿಸಲಾಗುತ್ತಿದೆ.ಸರ್ಕಾರ ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಸರ್ಕಾರ ಬದಲಾಯಿಸಿದೆ ಎಂದು ದೂರುತ್ತಿದ್ದಾರೆ. ಅಲ್ಲದೇ, ಈವಿದ್ಯಾರ್ಥಿನಿಯರು ಇಷ್ಟು ದಿನ ಇದೇ ಸಮವಸ್ತ್ರ ಧರಿಸಿದ್ದಾರೆ.ಆದರೆ, ಈಗ ಏಕಾಏಕಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ದೂರಿದ್ದಾರೆ. ದಯಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಆದೇಶ ನೀಡಬೇಡಿ ಎಂದು ಮನವಿ ಮಾಡಿದರು.