ಪುತ್ತೂರು: ಸಂಪ್ಯ ಅಕ್ಷಯ ಕಾಲೇಜಿನ ದ್ವಿತೀಯ ಬಿಎಸ್ಸಿ ಫ್ಯಾಷನ್ ಡಿಸೈನ್ ವಿದ್ಯಾರ್ಥಿನಿ ಪ್ರತೀಕ್ಷಾ ರೈ ಯವರು 2ನೇ ಅಂತರರಾಜ್ಯ, ಆನ್ಲೈನ್ ಯೋಗಾಸನ ಚಾಂಪಿಯನ್ ಶಿಪ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿಕೊಂಡಿದ್ದಾರೆ.
ಇವರು ರಾಜೇಶ್ ರೈ ಮತ್ತು ಪ್ರಫುಲ್ಲ ರೈ ದಂಪತಿ ಪುತ್ರಿ.
ಪ್ರತೀಕ್ಷಾ ರವರಿಗೆ ಅಕ್ಷಯ ಕಾಲೇಜಿನ ಆಡಳಿತ ವರ್ಗ , ಪ್ರಾಂಶುಪಾಲರು, ಅಡ್ಮಿನಿಸ್ಟ್ರೇಟಿವ್ ಆಫೀಸರ್ಸ್, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.