ಕಾಸರಗೋಡು: ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಫೆ.16 ರಂದು ಧ್ವಜಾರೋಹಣವಾಗಿ 5 ದಿವಸಗಳ ಉತ್ಸವ ನಡೆಯಲಿದ್ದು, ಈ ಹಿನ್ನೆಲೆ ಫೆ.10 ರಂದು ಗೊನೆ ಮುಹೂರ್ತ ಕಾರ್ಯಕ್ರಮವು ನಡೆಯಿತು.
ಫೆ.15 ರ ಮಂಗಳವಾರದಂದು ಪ್ರಾತಃಕಾಲ ಉಧ್ವಾರ್ಚನೆಯಾಗಿ ಮಹಾ ನೈವೇದ್ಯ ಸಮರ್ಪಣೆ, ಮಹಾಪೂಜೆ, ಪ್ರಸಾದ ಸ್ವೀಕಾರ. ರಾತ್ರಿ ಸಭಿಕರ ಕೂಡುವಿಕೆ, ಮಹಾಪೂಜೆ, ಪ್ರಸಾದ ಸ್ವೀಕಾರ, ಪ್ರಾರ್ಥನಾ ಪರೀಕ್ಷೆಯಾಗಿ ಉತ್ಸವದ ಸಾಮಾಗ್ರಿಗಳನ್ನು ಉಗ್ರಾಣದಲ್ಲಿ ಶೇಖರಿಸುವುದು. (ಅತ್ತಲ) ಹಾಗೂ ಫೆ.16ರ ಬುಧವಾರ ದಂದು ಪೂರ್ವಾಹ್ನ ಬಲಿವಾಡು ಕೂಟದೊಂದಿಗೆ ಮಹನೀಯರು ಸೇರಿ ದಿವಾ ಗಂಟೆ 08.30 ರಿಂದ 10.30ರ ಮಧ್ಯೆ ಧ್ವಜಾರೋಹಣವಾಗಿ ಮಹಾಪೂಜೆ, ಪ್ರಸಾದ ಸ್ವೀಕಾರ, ಅನ್ನಸಂತರ್ಪಣೆ. ರಾತ್ರಿ ಗಂಟೆ 07.00ಕ್ಕೆ ಶ್ರೀ ದೇವರ ಶೃಂಗಾರ ಬಲಿ ಉತ್ಸವ ನಡೆಯಲಿದೆ.
ಫೆ. 17ರ ಗುರುವಾರದಂದು ಪೂರ್ವಾಹ್ನ ಗಂಟೆ 07.00ಕ್ಕೆ ಶ್ರೀ ದೇವರ ಬಲಿ ಉತ್ಸವ, ಭಜಕರ ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ಸ್ವೀಕಾರ, ಅನ್ನಸಂತರ್ಪಣೆ. ರಾತ್ರಿ ಗಂಟೆ 07.00ಕ್ಕೆ ಶ್ರೀ ದೇವರ ಶೃಂಗಾರ ಬಲಿ ಉತ್ಸವ ಹಾಗೂ ಫೆ.18ರ ಶುಕ್ರವಾರದಂದು ಪೂರ್ವಾಹ್ನ ಗಂಟೆ 07.00ಕ್ಕೆ ಶ್ರೀ ದೇವರ ಬಲಿ ಉತ್ಸವ, ಭಜಕರ ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ಸ್ವೀಕಾರ, ಅನ್ನಸಂತರ್ಪಣೆ. ರಾತ್ರಿ ಗಂಟೆ 7.00ಕ್ಕೆ ಶ್ರೀ ದೇವರ ನಡುದೀಪೋತ್ಸವ ನಡೆಯಲಿದೆ.
ಫೆ. 19 ರ ಶನಿವಾರದಂದು ಪೂರ್ವಾಹ್ನ ಗಂಟೆ 07.00ಕ್ಕೆ ಶ್ರೀ ದೇವರ ಬಲಿ ಉತ್ಸವ, ಭಜಕರ ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ಸ್ವೀಕಾರ, ಅನ್ನಸಂತರ್ಪಣೆ, ರಾತ್ರಿ ಗಂಟೆ 07.00ಕ್ಕೆ ಶ್ರೀ ದೇವರ ಶೃಂಗಾರ ಬಲಿ ಉತ್ಸವವಾಗಿ ಶ್ರೀ ದೇವರಿಗೆ ಶಯನ ಬಲಿ ಉತ್ಸವವಾಗಿ ಶ್ರೀ ದೇವರಿಗೆ ಶಯನ ಸೇವೆ ನಡೆಯಲಿದೆ.
ಫೆ.20 ರ ರವಿವಾರ ಪೂರ್ವಾಹ್ನ ಗಂಟೆ 8.33ಕ್ಕೆ ಸಭಿಕರ ಕೂಡುವಿಕೆಯಿಂದ ಪ್ರಾರ್ಥನೆ, ಶಯನೋದ್ಘಾಟನೆ, ಮಹಾಪೂಜೆ ಕಳೆದು ತೀರ್ಥ ಪ್ರಸಾದ ಸ್ವೀಕಾರ ಅಪರಾಹ್ನ ಗಂಟೆ 6.30ಕ್ಕೆ ಶ್ರೀ ದೇವರ ಶೃಂಗಾರ ಬಲಿ ಉತ್ಸವ ಮತ್ತು ಮಾಮೂಲು ಸ್ಥಳಕ್ಕೆ ಚಿತೈಸಿ ಅವಭೃತ ಸ್ನಾನವಾಗಿ ಶ್ರೀ ದುರ್ಗಾಸೇವೆ ಕಳೆದು ಬಂದು ವಿಶೇಷ ಬೆಡಿಸೇವೆ ನಂತರ ಶ್ರೀ ದೇವರ ಮಹಾದರ್ಶನ ಬಲಿಯಾಗಿ ಬಟ್ಟಲು ಕಾಣಿಕೆ, ಪ್ರಸಾದ ಸ್ವೀಕಾರ, ಧ್ವಜಾವರೋಹಣವಾಗಿ ಮಂಗಳಾರತಿ, ನವಕಾಭಿಷೇಕ, ಮಂತ್ರಾಕ್ಷತೆ ನಡೆಯಲಿದೆ.
ಫೆ. 22ರ ಮಂಗಳವಾರ ಅಪರಾಹ್ನ ಗಂಟೆ 4.00ಕ್ಕೆ ಶ್ರೀ ದೇವರ ಪ್ರಧಾನ ದೈವ ಹುಲಿಭೂತ ಮತ್ತು ಪಟ್ಟದ ಅರಸು ಬಿರ್ನಾಳ್ವ ದೈವಗಳ ನೇಮನೃತ್ಯ, ಸಭಿಕರಿಗೆ ಅರಸಿನ ಹುಡಿ ಪ್ರಸಾದ ಸ್ವೀಕಾರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






























