ಬಜ್ಪೆ: ಬಾಡಿಗೆ ಮನೆಯೊಂದರಲ್ಲಿದ್ದ ಇಬ್ಬರು ಸಹೋದರಿಯರು ಕಾಣೆಯಾಗಿರುವ ಘಟನೆ ಬಜಪೆ ಠಾಣಾ ವ್ಯಾಪ್ತಿಯ ಕೊಂಚಾರ್ ಎಂಬಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಮುಬೀನ(22) ಹಾಗೂ ಬುಶ್ರಾ(21) ಎನ್ನಲಾಗಿದೆ.
ಫೆ. 07 ರ ರಾತ್ರಿ ಮನೆಮಂದಿಯೊಂದಿಗೆ ಊಟ ಮಾಡಿ ಮಲಗಿದ್ದ ಯುವತಿಯರು ನಾಪತ್ತೆಯಾಗಿದ್ದಾರೆ.
ಯುವತಿಯರ ತಂದೆ ಎದ್ದು ನೋಡಿದಾಗ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು,ಎಲ್ಲಾ ಕಡೆ ಹುಡುಕಾಡಿದರೂ ಪ್ರಯೋಜನಕ್ಕೆ ಬಾರದೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.