ಬೆಳ್ತಂಗಡಿ: ಇಲ್ಲಿನ ಪ್ರಸಿದ್ಧ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ನಲ್ಲಿ ಅಮೃತ ಮಹೋತ್ಸವದ 3ನೇ ಹಂತದ ಡ್ರಾದ ಬಹುಮಾನ ವಿತರಣಾ ಮತ್ತು ಗ್ರಾಹಕರ ಸಮಾಗಮ ಕಾರ್ಯಕ್ರಮವು ಫೆ.7 ರಂದು ಮುಳಿಯ ಜ್ಯುವೆಲ್ಸ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗ್ರಾಹಕರಾದ ಚಂಪಕುಮಾರಿ ದೀಪ ಬೆಳಗಿಸಿ ಉದ್ಘಾಟಿಸಿ ಮುಳಿಯ ಸಂಸ್ಥೆಯು ಗ್ರಾಹಕರಿಗೆ ನೀಡುವ ಸೇವೆಯನ್ನು ಶ್ಲಾಘಿಸಿ ನಾನು ಈ ಸಂಸ್ಥೆಯ ಒಂದು ಗ್ರಾಹಕಿ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು. ಅದಲ್ಲದೆ ಸಂಸ್ಥೆಯ ಸಾಮಾಜಿಕ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಅತಿಥಿ ಉದ್ಯಮಿ ರಾಕೇಶ್ ಸಾಲ್ಯಾನ್ ಸಂಸ್ಥೆಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೃಷ್ಣ ನಾರಾಯಣ ಮುಳಿಯ ರವರು ಮಾತನಾಡಿ, ಮುಳಿಯ ಜ್ಯುವೆಲ್ಸ್ ಗೆ ಬೆಳ್ತಂಗಡಿಯಿಂದ ಗ್ರಾಹಕರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇನ್ನು ಮುಂದೆಯೂ ತಮ್ಮ ಪ್ರೋತ್ಸಾಹವನ್ನು ನೀಡಬೇಕೆಂದು ಹೇಳಿದರು.
ಅಮೃತ ಮಹೋತ್ಸವದ 375 ಬಹುಮಾನಗಳ ವಿವರವನ್ನು ನಿಖರವಾಗಿ ವಿವರಿಸಿ, ಬೆಳ್ತಂಗಡಿಯ ಗ್ರಾಹಕರಿಗೆ ಕಾರು ಡ್ರಾ ಬಂದಿರುವುದು ನಮಗೂ ಹಾಗೂ ಬೆಳ್ತಂಗಡಿ ಜನತೆಗೆ ಖುಷಿ ತಂದಿದೆ. ಈ ಕೊರೋನಾ ಕಾಲದಲ್ಲಿಯೂ ನಮಗೆ ಉತ್ತಮ ಬೆಂಬಲ ನೀಡಿದ್ದೀರಿ, 78ನೇ ವರ್ಷದಲ್ಲಿರುವ ನಮ್ಮ ಸಂಸ್ಥೆಗೆ ಇನ್ನು ಮುಂದೆಯೂ ತಮ್ಮ ಪ್ರೋತ್ಸಾಹವನ್ನು ನೀಡಬೇಕೆಂದು ಹೇಳಿದರು.
ಸಂಸ್ಥೆಯ ಮಾರ್ಕೇಟಿಂಗ್ ಕನ್ಸ್ಲ್ಟೆಂಟ್‌ರಾದ ವೇಣುಶರ್ಮ ರವರು ಗ್ರಾಹಕರ ಸಮಾಗಮವನ್ನು ಕಾರ್ಯಕ್ರಮವನ್ನು ನೆರವೇರಿಸಿದರು.
ಬಂಪರ್ ವಿಜೇತರಾದ ಪಲ್ಲವಿರಾಜ್ ಕಾರಿನ ಬದಲಾಗಿ ಚಿನ್ನಾಭರಣ ಖರೀದಿಸಿದರು. ಶೋರೂಂ ಮ್ಯಾನೇಜರ್ ಗುರುರಾಜ್ ಅವಭೃತ ಅವರು ಸ್ವಾಗತಿಸಿದರು. ಸಂಸ್ಥೆಯ ಫೈನಾನ್ಸ್ ಮ್ಯಾನೇಜರ್ ಶಿವಪ್ರಸಾದ್ ಉಪಸ್ಥಿತರಿದ್ದರು.
ಶೋರೂಂ ಅಸಿಸ್ಟೆಂಟ್ ಶೋರೂಂ ಮ್ಯಾನೇಜರ್ ರಾದ ಸತ್ಯಗಣೇಶ್ ರವರು ವಂದನಾರ್ಪಣೆ ಮಾಡಿದರು. ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಜ್ಞಾ ಓಡಿನ್ನಾಳ ಕಾರ್ಯಕ್ರಮವನ್ನು ನಿರೂಪಿಸಿದರು. ಜಯಶ್ರೀ, ಶಿವಶಂಕರ್ ಮತ್ತು ಡ್ರೀಮ್ ಝೋನ್ ತಂಡದಿಂದ ಕರೋಕೆ ಗಾಯನ ಮತ್ತು ನೃತ್ಯದ ಮೂಲಕ ರಂಜಿಸಿದರು.