ಕಡಬ: ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಪತ್ತೆಯಾದ ಘಟನೆ ಕೋಡಿಂಬಾಳದ ಕೊಠಾರಿ ಎಂಬಲ್ಲಿ ನಡೆದಿದ್ದು, ಈತನನ್ನು ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಪೋಲಿಸ್ ವಶಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿ ವಾಸವಿರುವ ಮಹಿಳೆಯ ಮನೆಯಲ್ಲಿ ಅನ್ಯಕೊಮಿನ ವ್ಯಕ್ತಿಯೋರ್ವರು ತಂಗಿದ್ದು, ಮಹಿಳೆಯನ್ನು ಮತಾಂತರ ಮಾಡುವ ಉದ್ದೇಶದಿಂದ ಹಲವಾರು ಸಮಯಗಳಿಂದ ಪ್ರಯತ್ನಗಳು ಈ ವ್ಯಕ್ತಿಯಿಂದ ನಡೆದಿದೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೂರಕ ಸಾಕ್ಷಾಧಾರಗಳು ದೊರೆತಿರುವುದರಿಂದ ಮಹಿಳೆಯ ಮನೆಗೆ ಕಡಬ ಸಂಘಟನೆಯ ಕಾರ್ಯಕರ್ತರು ಭೇಟಿ ನೀಡಿ ಮನವೊಲಿಸಿದ್ದು, ಆದರೆ ಈ ವ್ಯಕ್ತಿಯೂ ಹಲವಾರು ಸಮಯದಿಂದ ಮಹಿಳೆಯ ಮನೆಗೆ ಬರುತ್ತಿರುವುದು ಸಂಘಟನೆಯವರ ಕೆಂಗಣ್ಣಿಗೆ ಗುರಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಫೆ.11 ರಂದು ಮುಂಜಾನೆ ಆ ವ್ಯಕ್ತಿಯನ್ನು ಪೋಲಿಸ್ ವಶಕ್ಕೆ ನೀಡಿದ್ದು ಸದ್ಯ ಆ ವ್ಯಕ್ತಿ ಪೋಲಿಸ್ ವಶದಲ್ಲಿದ್ದಾನೆ ಎಂದು ತಿಳಿದು ಬಂದಿದೆ.