ಪುತ್ತೂರು: ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ದ್ವಿತೀಯ ಬಿ.ಎಸ್ಸಿ ಫ್ಯಾಷನ್ ಡಿಸೈನ್ ವಿದ್ಯಾರ್ಥಿನಿ, ಯೋಗಸಾಧಕರಾದ ಚಂದ್ರಹಾಸ್ ಹಾಗೂ ಹೇಮಾ ಅಗಳಿ ಅವರ ಮಗಳಾದ ಪ್ರಣಮ್ಯ ಅಗಳಿ ಅವರು ಇತ್ತೀಚೆಗೆ ಪೋರ್ಟ್ ಬ್ಲೇರ್, ಅಂಡಮಾನಿನಲ್ಲಿ ನಡೆದ 6ನೇ ರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ ನಲ್ಲಿ ಹಾಗೂ 2ನೇ ಅಂತರರಾಜ್ಯ ಆನ್ಲೈನ್ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.
ಕಳೆದ ಬಾರಿ ಇವರು ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ 30 ದೇಶಗಳೊಡನೆ ಸ್ಪರ್ಧಿಸಿ ಚಾಂಪಿಯನ್ ಆಗಿದ್ದು, ಕ್ರೀಡಾ ಭಾರತಿ ಮಂಗಳೂರು ಇದರಿಂದ ಜೀಜಾಬಾಯಿ ಪುರಸ್ಕಾರ ಪಡೆದಿರುತ್ತಾರೆ. ಪ್ರಣಮ್ಯ ರವರನ್ನು ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು, ಪ್ರಾಂಶುಪಾಲರು, ಆಡಳಿತಾಧಿಕಾರಿ ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದೆ.