ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ನ ಟೀಸರ್ ಬಿಡುಗಡೆಯಾಗಿದ್ದು, ಸಖತ್ ಹಿಟ್ ಆಗಿದೆ.
ಬಹುಭಾಷೆಗಳಲ್ಲಿ ರಿಲೀಸ್ ಆಗಿರುವ ಜೇಮ್ಸ್ ಟೀಸರ್ ಗೆ ದೇಶದ ಮೂಲೆ ಮೂಲೆಮೂಲೆಗಳಿಂದ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ನಿನ್ನೆ ಜೇಮ್ಸ್ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಒಂದು ಗಂಟೆಯಲ್ಲೇ ಒಂದು ಮಿಲಿಯನ್ ವ್ಯೂಸ್ ಪಡೆದಿತ್ತು. ಈವರೆಗೆ 93 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ತಮಿಳು, ತೆಲುಗು, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಎಲ್ಲೂ ಡಿಸ್ ಲೈಕ್ ಸಿಕ್ಕಿಲ್ಲ. ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿ 1.1 ಮಿಲಿಯನ್ (11 ಲಕ್ಷ), ತೆಲುಗಿನಲ್ಲಿ 1.4 ಮಿಲಿಯನ್ (14 ಲಕ್ಷ) ವ್ಯೂಸ್ ಆಗಿದೆ. ಈ ಚಿತ್ರದಲ್ಲಿ ಪುನೀತ್ ಅವರ ಪಾತ್ರಕ್ಕೆ ಶಿವರಾಜ್ ಕುಮಾರ್ ಡಬ್ಬಿಂಗ್ ಮಾಡಿದ್ದಾರೆ. ಪುನೀತ್ ಅವರ ಹುಟ್ಟು ಹಬ್ಬ ಮಾ.17 ರಂದು ಜೇಮ್ಸ್ ಚಿತ್ರದ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.