ಸುಳ್ಯ: ತಾಲೂಕು ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಶಾಲಾ ಬಳಿ ನಿಲ್ಲಿಸಿದ್ದ ಕಾರಿನ ಮುಂಭಾಗಕ್ಕೆ ಬೆಂಕಿ ಸ್ಪರ್ಶಗೊಂಡು ಕಾರಿನ ಮುಂಭಾಗ ಹಾನಿಯಾದ ಘಟನೆ ನಡೆದಿದೆ.
ಜಾಲ್ಸೂರು ಕುಕ್ಕಂದೂರು ನಿವಾಸಿಯೋರ್ವರು ತಮ್ಮ ತೋಟಕ್ಕೆ ಹೋಗುವ ಸಂದರ್ಭ ರಸ್ತೆ ಬಳಿ ವಿದ್ಯುತ್ ಕಂಬದ ಪಕ್ಕದಲ್ಲಿ ಕಾರು ನಿಲ್ಲಿಸಿ ಹೋಗಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ವಿದ್ಯುತ್ ತಂತಿ ಶಾರ್ಟ್ ಆಗಿ ರಸ್ತೆ ಪಕ್ಕದ ಹುಲ್ಲಿಗೆ ಬಿದ್ದು ಬೆಂಕಿ ಆವರಿಸಿದೆ. ಈ ವೇಳೆ ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿಗೂ ಬೆಂಕಿ ತಗುಲಿ ಕಾರಿನ ಮುಂಭಾಗ
ಉರಿಯಲು ಆರಂಭಿಸಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಬೆಂಕಿ ಕಾರನ್ನು ಆವರಿಸುವ ಮೊದಲು ಸ್ಥಳೀಯರು ಬಂದು ನೀರು ಹಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ದೊಡ್ಡ ದುರಂತ ತಪ್ಪಿದಂತಾಗಿದೆ.