ವಿಟ್ಲ: ಸಿಟಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಬಿ. ಸಂದೇಶ್ ಶೆಟ್ಟಿ ರವರ ತಂದೆ ಸಂಜೀವ ಶೆಟ್ಟಿ (83)ರವರು ಫೆ.12 ರಂದು ನಿಧನರಾದರು.
ಸಂಜೀವ ಶೆಟ್ಟಿ ರವರು ಕೃಷಿಕರಾಗಿದ್ದು, ಕೊಡಂಗಾಯಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿದ್ದರು.
ಮೃತರ ಅಂತ್ಯಕ್ರಿಯೆ ಇಂದು ರಾತ್ರಿ ಬಿಕ್ನಜೆಯ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
ಲಯನ್ಸ್ ಪ್ರಾಂತ್ಯ ಸಲಹೆಗಾರ ಸುದರ್ಶನ್ ಪಡಿಯಾರ್, ಗೈಡಿಂಗ್ಸ್ ಲಯನ್ಸ್ ಸತೀಶ್ ಕುಮಾರ್ ಆಳ್ವ, ಇಂಜಿನಿಯರ್ ಹಾಗೂ ಮೆಂಬರ್ ಭಾಸ್ಕರ್ ರೈ, ಸುರೇಶ್ ಬನಾರಿ, ದಿನಕರ್ ಆಳ್ವ, ಮುಂತಾದವರು ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು.
ಜಿಲ್ಲಾ ಗವರ್ನರ್ ವಸಂತ್ ಕುಮಾರ್ ಶೆಟ್ಟಿ,ಪ್ರಥಮ ಗವರ್ನರ್ ಸಂಜಿತ್ ಶೆಟ್ಟಿ,ದ್ವಿತೀಯ ರಾಜ್ಯಪಾಲ ಮೆಲ್ವಿನ್ ಡಿಸೋಜಾ, ಪ್ರಾಂತೀಯ ಅಧ್ಯಕ್ಷ ಹೇಮನಾಥ ಶೆಟ್ಟಿ ಹಾಗೂ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸರ್ವ ಸದಸ್ಯರು ಸಂಜೀವ ಶೆಟ್ಟಿ ರವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.