ಪುತ್ತೂರು: ಪ್ಯಾರಾ ಮೆಡಿಕಲ್ ಬೋರ್ಡ್ ಕರ್ನಾಟಕ ನಡೆಸಿದ 2020-21ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಪುತ್ತೂರಿನ ಹೆಚ್.ಪಿ. ಆರ್. ಪ್ಯಾರಾ ಮೆಡಿಕಲ್ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ 100% ಫಲಿತಾಂಶ ಬಂದಿದೆ.
ಸಂಸ್ಥೆಯ ದ್ವಿತೀಯ ವರ್ಷದ DOTT ಮತ್ತು AT(ಡಿಪ್ಲೊಮಾ ಇನ್ ಆಪರೇಷನ್ ಮತ್ತು ಅನಸ್ತೇಶಿಯಾ ಟೆಕ್ನಾಲಜಿ ಕೋರ್ಸಿನ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಸಂಸ್ಥೆಗೆ ಶೇಕಡಾ 100% ಫಲಿತಾಂಶ ಬಂದಿದೆ.
DMLT (ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ) ಕೋರ್ಸಿನಲ್ಲಿ ಸಂಸ್ಥೆಯು ಶೇ.94 ಫಲಿತಾಂಶ ಪಡೆದುಕೊಂಡಿದೆ. DMLT ವಿಭಾಗದಲ್ಲಿ ರಶ್ಮಿತಾ ಆರ್.ಜೆ. ಪ್ರಥಮ ಸ್ಥಾನ, ಮೋನಿಕಾ ಕೆ.ಎಸ್. ದ್ವಿತೀಯ ಸ್ಥಾನ ಪಡೆದಿದ್ದಾರೆ.
DOTT ಮತ್ತು AT ವಿಭಾಗದಲ್ಲಿ ಆಯಿಷತ್ ಸಲೀನಾ ಪ್ರಥಮ ಸ್ಥಾನ ಹಾಗೂ ಶ್ರಾವ್ಯ ಎಂ. ದ್ವಿತೀಯ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.