ಸುಳ್ಯ: ವ್ಯಕ್ತಿಯೋರ್ವರ ಮೃತದೇಹ ಬೆಳ್ಳಾರೆ ಮುಖ್ಯ ಪೇಟೆಯ ಎ.ಪಿ.ಎಂ.ಸಿ ಕಟ್ಟಡದಲ್ಲಿ ದೊರೆತಿದೆ ಎಂದು ತಿಳಿದು ಬಂದಿದೆ.
ಮೃತರನ್ನು ನಿಂತಿಕಲ್ಲು ಆಸುಪಾಸಿನಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದ ತಮಿಳುನಾಡಿನ ಸೇಲಂ ಮೂಲದ ವ್ಯಕ್ತಿ ಗಣೇಶ ಎಂ. ( 38) ಎನ್ನಲಾಗಿದೆ.
ಬೆಳ್ಳಾರೆ ಪೇಟೆಯಲ್ಲಿ ಕೂಲಿ ಕೆಲಸಕ್ಕೆ ಹೋಗುವವರು ಬೆಳ್ಳಾರೆಯ ಎ.ಪಿ.ಎಂ.ಸಿ. ಸಂತೆಮಾರುಕಟ್ಟೆಯಲ್ಲಿ ಶವ ಬಿದ್ದಿರುವುದನ್ನು ಕಂಡು ಬೆಳ್ಳಾರೆ ಠಾಣೆಗೆ ತಿಳಿಸಿದರೆನ್ನಲಾಗಿದೆ.
ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈತ ಕೆಲ ಸಮಯದಿಂದ ಬೆಳ್ಳಾರೆ ಪೇಟೆಯಲ್ಲಿ ವಿಪರೀತ ಮದ್ಯಪಾನ ಮಾಡಿ ಯಾವುದೇ ಆಹಾರ ಸೇವಿಸದೆ ತಿರುಗುತ್ತಿದ್ದ ಎನ್ನಲಾಗಿದೆ.





























