ಕೊಕ್ಕಡ: ಚಾಲಕನ ನಿಯಂತ್ರಣ ತಪ್ಪಿ ಜೀಪು ಪಲ್ಟಿಯಾದ ಘಟನೆ ಕೊಕ್ಕಡ ಮತ್ತು ಅರಸಿನಮಕ್ಕಿ ಸಮೀಪದ ಪುತ್ತಿಗೆಯಲ್ಲಿ ಫೆ.14 ರಂದು ರಾತ್ರಿ ನಡೆದಿದೆ.
ಜೀಪಿನಲ್ಲಿದ್ದ ಹಲವಾರು ಮಂದಿಗೆ ತೀವ್ರ ಗಾಯವಾಗಿದೆ.
ಕೊಕ್ಕಡ ಸಮೀಪ ನೇಮಕ್ಕೆಂದು ಕಡಬದ ಕೊಣಾಜೆಯಿಂದ ಕುಟುಂಬವೊಂದು ಜೀಪಿನಲ್ಲಿ ತೆರಳುತ್ತಿದ್ದ ವೇಳೆ ಮುತ್ತಿಗೆ ತಲುಪುತ್ತಿದ್ದಂತೆ ತಿರುವಿನಲ್ಲಿ ಚಾಲಕನ ಹತೋಟಿ ತಪ್ಪಿ ಜೀಪು ಪಲ್ಟಿಯಾಗಿದೆ.
ಜೀಪಿನಲ್ಲಿದ್ದವರ ಪೈಕಿ ಮೂವರು ಮಕ್ಕಳು, ವೃದ್ದೆ ಸೇರಿದಂತೆ ಏಳು ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಬಂದು, ತೀವ್ರ ಗಾಯಗೊಂಡ ವೃದ್ದೆ ಮತ್ತು ಮಕ್ಕಳನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಅಪಘಾತಗೊಂಡ ಜೀಪಿನಲ್ಲಿದ್ದ ಹರೀಶ್ ಮತ್ತು ಸ್ಥಳೀಯರು ಸೇರಿಕೊಂಡು 108 ಆ್ಯಂಬುಲೆನ್ಸ್ ಮತ್ತು ಮಾರುತಿ ವ್ಯಾನ್ ನಲ್ಲಿ ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕರೆ ತಂದಿದ್ದಾರೆ.
ಅಪಘಾತದಿಂದ ಗಾಯಗೊಂಡ ಗಾಯಾಳುಗಳನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ತೀವ್ರ ಗಾಯಗೊಂಡ ಮಕ್ಕಳನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯ ಬೇಕಾಗಿದ್ದು, ತಕ್ಷಣ ಪುತ್ತೂರು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಪುತ್ತೂರಿನಿಂದ ಬರುವ ಗಾಯಾಳುಗಳ ವಿವರ ನೀಡಿ. ಗಾಯಾಳುಗಳಿಗೆ ಧೈರ್ಯ ನೀಡಿದರು.