ವಿಟ್ಲ: ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನ ಹತ್ತಿರ ಅನ್ನಛತ್ರದ ಪೂರ್ವ ಭಾಗದಲ್ಲಿ ನಿರ್ಮಾಣಗೊಳ್ಳಲಿರುವ ದಿ. ಅಶೋಕ್ ಎ ಇರಾಮೂಲೆ ಇವರ ಸ್ಮರಣಾರ್ಥ ರಂಗ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಫೆ.17 ರಂದು ನೆರವೇರಿತು.
ಕಾರ್ಯಕ್ರಮದಲ್ಲಿ ಕೃಷ್ಣಯ್ಯ ವಿಟ್ಲ ಅರಮನೆ, ಶ್ರೀ ದುರ್ಗಾ ಸೇವಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ ಪಡಿಬಾಗಿಲು, ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಪಡಿಬಾಗಿಲು, ಕೋಶಾಧಿಕಾರಿ ಗೋವಿಂದರಾಯ ಶೆಣೈ ಅಡ್ಯನಡ್ಕ, ಕಾರ್ಯದರ್ಶಿ ಗಳಾದ ಜಿನಚಂದ್ರ ಜೈನ್, ಸುರೇಶ್ ನಾಯ್ಕ ಕೋಡಂದೂರು, ಕವಿತಾ ಅಶೋಕ್ ಇರಾಮೂಲೆ, ಪಂಚಾಯತ್ ಸದಸ್ಯರಾದ ಜಗಜೀವನ್ ರಾಮ್ ಶೆಟ್ಟಿ ಮೈರ, ಪುರುಷೋತ್ತಮ ಗೌಡ ಕಲ್ಲಂಗಳ, ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ, ಪುರುಷೋತ್ತಮ ಮೈರ, ಬಾಲಕೃಷ್ಣ ಪೆಲತ್ತಡಿ, ಪುರಂದರ ಶೆಟ್ಟಿ ಕೇಪು, ಸತೀಶ್ ಕೇಪು, ಸುಧಾಕರ ಪೂಜಾರಿ ಬಡಕ್ಕೋಡಿ, ಜಯರಾಮ ಸಾರಡ್ಕ, ಕೃಷ್ಣಪ್ಪ ಗೌಡ ಕೇಪು, ಚಂದಪ್ಪ ಗೌಡ ಕೇಪು, ಆಚಾರ್ಯ ಚಂದ್ರಶೇಖರ್ ಎರುಂಬು, ಇಂಜಿನಿಯರ್ ಸಂತೋಷ್ ವಿಟ್ಲ ಉಪಸ್ಥಿತರಿದ್ದರು.