ಬೆಂಗಳೂರು: ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ತನ್ನ ಅಧೀನದಲ್ಲಿರೋ ಶಾಲಾ ಕಾಲೇಜುಗಳಲ್ಲಿ ಯಾವುದೇ ರೀತಿಯ ಶಾಲು, ಸ್ಕಾರ್ಪ್ ಹಾಗೂ ಹಿಜಾಬ್ ಧರಿಸದಂತೆ ಸುತ್ತೋಲೆ ಹೊರಡಿಸಲಾಗಿದೆ.
ಇಂದು ಮಧ್ಯಾಹ್ನ ತನ್ನ ಅಧೀನ ಶಾಲಾ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿರುವ ಇಲಾಖೆ, ಹಿಜಾಬ್, ಕೇಸರಿ ಶಾಲು, ಸ್ಕಾರ್ಪ್ ಧರಿಸದಂತೆ ಸೂಚಿಸಿದೆ. ಜೊತೆಗೆ ಯಾವುದೇ ಧಾರ್ಮಿಕ ಬಾವುಟಗಳನ್ನ ಶಾಲಾ ಕಾಲೇಜುಗಳ ಆವರಣದಲ್ಲಿ ಬಳಸದಂತೆ ಸೂಚಿಸಿದೆ. ಹೈಕೋರ್ಟ್ ಮಧ್ಯಂತರ ಆದೇಶ ಹಿನ್ನೆಲೆ ಇಲಾಖೆ ಸುತ್ತೋಲೆ ಹೊರಡಿಸಿದೆ.