ಪಂಚೋಡಿ: ಶ್ರೀ ರಾಮ್ ಫ್ರೆಂಡ್ಸ್ ಪಂಚೋಡಿ, ಈಶ್ವರಮಂಗಲ ಇದರ ಆಶ್ರಯದಲ್ಲಿ, ದಿ. ದೇವಿಪ್ರಸಾದ್ ಶೆಟ್ಟಿ ಬಂಟುಕಲ್ಲು ಸ್ಮರಣಾರ್ಥ ಉದ್ದೇಶಿತ ಸಾರ್ವಜನಿಕ ಬಸ್ ತಂಗುದಾಣ ನಿರ್ಮಾಣದ ಸಂಗ್ರಹಕ್ಕಾಗಿ 8 ಜನರ ಮುಕ್ತ ಕ್ರಿಕೆಟ್ ಪಂದ್ಯಾಟ ಶ್ರೀದೇವಿ ಟ್ರೋಫಿ- 2022 ಇಂದು ಆರಂಭವಾಗಿದೆ.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮಂಗಳೂರಿನ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರ್ ಎನ್ ಎಸ್, ಅಮರನಾಥ್ ಆಳ್ವ ಕರ್ನೂರುಗುತ್ತು, ಕಾವು ವಲಯದ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಸತೀಶ್ ಸುರುಳಿಮೂಲೆ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ವೆಂಕಪ್ಪ ನಾಯ್ಕ ಮೇನಾಲ, ಕುಕ್ಕುಡೇಲು ಎಸ್ಟೇಟ್ ಮಾಲಕ ನವೀನ್ ಗೌಡ ಕುಕ್ಕುಡೇಲು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಫೆ. 20ರಂದು ಕೂಡಾ ಪಂದ್ಯಾವಳಿ ಮುಂದುವರಿಯಲಿದ್ದು, ವಿಜೇತರಿಗೆ ನಗದು ಬಹುಮಾನ ಸಹಿತ ಹಲವಾರು ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






























