ಸುಳ್ಯ: ಗಾಂಜಾ ಸೇವನೆ ಮಾಡಿ ಅನುಮಾನಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಸುಳ್ಯ ತಾಲೂಕಿನ ಪೆರುವಾಜೆ ಕಾಲೇಜು ಬಳಿಯ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಪೆರುವಾಜೆ ಪಲ್ಲತ್ತಡ್ಕ ನಿವಾಸಿ ಹನೀಫ್(54) ಎನ್ನಲಾಗಿದೆ.
ಬೆಳ್ಳಾರೆ ಠಾಣೆ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಮತ್ತು ಸಿಬ್ಬಂದಿಗಳು ರೌಂಡ್ಸ್ ನಲ್ಲಿದ್ದ ವೇಳೆ ಪೆರುವಾಜೆ ಕಾಲೇಜು ಬಳಿಯ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವ ಸಂಶಯಾಸ್ಪದವಾಗಿ ನಿಂತಿದ್ದು, ಆತನ ಬಳಿ ವಿಚಾರಣೆ ನಡೆಸಿದಾಗ ಅಸ್ಪಷ್ಟ ಮಾಹಿತಿ ನೀಡಿದ್ದು, ಅಮಲು ಪದಾರ್ಥ ಸೇವನೆ ಮಾಡಿದಂತೆ ಕಂಡು ಬಂದ ಕಾರಣ ಆತನನ್ನು ಕರೆ ತಂದು ಆಸ್ಪತ್ರೆಗೆ ಪರೀಕ್ಷಿಸಿದಾಗ ಆತ ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿರುವುದು ಸಾಬೀತಾಗಿರುವ ಕಾರಣ ಆತನ ವಿರುದ್ಧ ಕಲಂ 27(B) narcotuc drugs and psychotropic substances act ನಂತೆ ಪ್ರಕರಣ ದಾಖಲಾಗಿದೆ.




























