ವಿಟ್ಲ: ವಿಪರೀತ ಮದ್ಯ ಸೇವನೆ ಮಾಡಿ ಪತ್ನಿಯ ಜತೆಗೆ ಜಗಳವಾಡಿದ ಪತಿ ಮನೆ ಬಿಟ್ಟು ಹೋದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಕಸಬಾ ಗ್ರಾಮದ ಕಾನತ್ತಡ್ಕ ನಿವಾಸಿ ನಾಗೇಶ್ ಗೌಡ ಕೆ. (65) ನಾಪತ್ತೆಯಾದವರಾಗಿದ್ದಾರೆ.
ಜ.31ರ ಸಂಜೆ ಮದ್ಯ ಸೇವನೆ ಮಾಡಿ ಪತ್ನಿಯ ಜತೆಗೆ ಗಲಾಣೆ ಮಾಡಿದ ಇವರು ಫೆ.1ರಂದು ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೋದವರು ಮರಳಿ ಬಂದಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದ ಬಗ್ಗೆ ಪತ್ನಿ ಸುಮತಿ ನೀಡಿದ ದೂರಿನಲ್ಲಿ ಹೇಳಿದ್ದಾರೆ.