ಪುತ್ತೂರು: ಆರ್.ಎಸ್.ಎಸ್. ಕಾರ್ಯಕರ್ತ, ಕಾಸರಗೋಡಿನ ಎಂಟೆದೆ ಬಂಟ ಎಂದೇ ಖ್ಯಾತಿಯಾಗಿದ್ದ ಜ್ಯೋತಿಶ್ ರವರು ಕೆಲ ದಿನಗಳ ಹಿಂದೇ ನಿಧನರಾಗಿದ್ದು, ಅವರ ಕುಟುಂಬಕ್ಕೆ ಯುವ ಉದ್ಯಮಿ ಮನ್ಮಿತ್ ರೈ ರವರು ಗೌರವ ಧನ ನೀಡುವ ಮೂಲಕ ನೆರವಾಗಿದ್ದಾರೆ.
ಜ್ಯೋತಿಶ್ ರವರ ನಿಧನದ ಬಳಿಕ ಅವರ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವ ಸಲುವಾಗಿ ಮನ್ಮಿತ್ ರೈ ರವರು 25,000 ರೂ. ಅನ್ನು ಜ್ಯೋತಿಶ್ ರವರ ಕುಟುಂಬಕ್ಕೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಮನ್ಮಿತ್ ರೈ ರವರು ಹಲವು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ, ಕಷ್ಟದಲ್ಲಿರುವರಿಗೆ ಸ್ಪಂದಿಸುತ್ತಿದ್ದು, ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿಯೂ ಹಲವಾರು ಬಡ ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.