ಪುತ್ತೂರು: ಹಿರಿಯ ನ್ಯಾಯವಾದಿ ಕೆ ಸತೀಶ್ ಪ್ರಭು(66) ರವರು ಫೆ.23 ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಸತೀಶ್ ಪ್ರಭು ರವರು ಕಳೆದ ಕೆಲ ವರ್ಷಗಳಿಂದ ಅನ್ಯಾರೋಗ್ಯದಿಂದ ಬಳಲುತ್ತಿದ್ದು, ಇತ್ತೀಚೆಗೆ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
ಬೊಳುವಾರು ಕಾಪಿಕಾಡು ದಿ ಪುಂಡಲಿಕ ಪ್ರಭು ಅವರ ಪುತ್ರ ರಾದ ಕೆ.ಸತೀಶ್ ಪ್ರಭು ಅವರು ಪ್ರತಿಷ್ಟಿತ ಕಂಡಿಗೆ ಕುಟುಂಬಕ್ಕೆ ಸೇರಿದವರು. ಪುತ್ತೂರಿನ ಬೊಳ್ವಾರುನಲ್ಲಿ ಕಛೇರಿ ಹೊಂದಿದ್ದ ಅವರು ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣಗಳ ವಾದದಲ್ಲಿ ನಿಪುಣರಾಗಿದ್ದರು.
ಮೃತರು ತಾಯಿ, ಪತ್ನಿ ಸುಧಾ ಎಸ್ ಪ್ರಭು, ಪುತ್ರಿ ಶಿಲ್ಪಾ ಪ್ರಭು, ಪುತ್ರ ವಿಘ್ನೇಶ್ ಪ್ರಭು ಹಾಗೂ ಮೂವರು ಸಹೋದರರು, ಸಹೋದರಿಯನ್ನು ಅಗಲಿದ್ದಾರೆ.


























