ಪುತ್ತೂರು: ಶಿವಮೊಗ್ಗದಲ್ಲಿ ಹತ್ಯೆಗೀಡಾದ ಪರಿವಾರದ ಕಾರ್ಯಕರ್ತ ಹರ್ಷ ರವರ ಕುಟುಂಬಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ರವರು ಮತ್ತು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಮತ್ತು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ರವರು ತಮ್ಮ ಒಂದು ತಿಂಗಳ ಗೌರವ ವೇತನವನ್ನು ನೀಡುವುದಾಗಿ ತಿಳಿಸಿದ್ದಾರೆ.
ಮಾದ್ಯಮದವರೊಂದಿಗೆ ಮಾತನಾಡಿದ ಅವರು ಮೃತ ಹರ್ಷ ಬಜರಂಗದಳದಕಾರ್ಯಕರ್ತರಾಗಿದ್ದಾರೆ. ರಾಜ್ಯದಲ್ಲಿ ಇವತ್ತು ಒಂದಷ್ಟು ಮುಸ್ಲಿಂ ಮತಾಂದ ವ್ಯಕ್ತಿಗಳು ಸರಕಾರಕ್ಕೆ ಕೆಟ್ಟ ಹೆಸರು ಮತ್ತು ಮತೀಯವಾಗಿ ಸಂಘರ್ಷ ತರುವ ಉದ್ದೇಶದಿಂದ ಹಿಂದು ಕಾರ್ಯಕರ್ತರ ಕೊಲೆಯನ್ನು ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇನೆ. ಮತಾಂಧ ವ್ಯಕ್ತಿಗಳನ್ನು ಮುಂದಿನ ದಿನಗಳಲ್ಲಿ ಜೈಲಿಗೆ ಹಾಕುವ ಕೆಲಸವನ್ನು ನಮ್ಮ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದಾರೆ.
ಘಟನೆಯ ಹಿಂದೆ ಯಾರ ಕೈವಾಡವಿದೆ ಎಂದು ಎನ್.ಐ. ತನಿಖೆ ಮಾಡಲು ಒತ್ತಾಯ ಮಾಡುತ್ತಿದ್ದೇವೆ. ಅದರ ಜೊತೆಗೆ ಹರ್ಷನಂತಹ ಯುವಕರು ಬಲಿದಾನ ಆಗಿದ್ದಾರೋ ಅಂತವರ ಕುಟುಂಬಕ್ಕೆ ನಾನು ಸೇರಿದಂತೆ ನಮ್ಮೆಲ್ಲ ಶಾಸಕರು ಸೇರಿಕೊಂಡು ಒಂದು ತಿಂಗಳ ವೇತನವನ್ನು ನೀಡುತ್ತೇವೆ ಎಂದು ತಿಳಿಸಿದರು.