ಪುತ್ತೂರು: ಮುಳಿಯ ಗೋವಿಹಾರ ಆಶ್ರಯದಲ್ಲಿ ಹಾಗೂ ಗೋಫಲ ಟ್ರಸ್ಟ್ ನೇತೃತ್ವದಲ್ಲಿ ‘ಅರಿಯೋಣ ಬನ್ನಿ ಗೋಜನ್ಯ ಉತ್ಪನ್ನಗಳನ್ನು’ ಗೋವು ಆಧರಿತ ಉತ್ಪನ್ನಗಳ ತಯಾರಿಕಾ ಕಾರ್ಯಗಾರವು ಫೆ.27 ರಂದು ಬೆಳಗ್ಗೆ 9 ಗಂಟೆಗೆ ಪುತ್ತೂರಿನ ಕಬಕ ಸಮೀಪದ ಓಜಾಲದಲ್ಲಿರುವ ಮುಳಿಯ ಗೋವಿಹಾರದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಗೋಫಲ ಟ್ರಸ್ಟ್ ನ ಟ್ರಸ್ಟಿ ಕೇಶವ ಪ್ರಸಾದ್ ಮುಳಿಯ ಅವರು ದೀಪೋಜ್ವಲನದ ಮೂಲಕ ಉದ್ಘಾಟಿಸಲಿದ್ದಾರೆ. ಗೋಫಲ ಟ್ರಸ್ಟ್ ನ ಅಧ್ಯಕ್ಷರಾದ ಕೊಂಕೋಡಿ ಪದ್ಮನಾಭ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಆಸಕ್ತ ಶಿಬಿರಾರ್ಥಿಗಳು ಮುಂದೆ ನೀಡಲಾಗಿರುವ ಮೊಬೈಲ್ ಸಂಖ್ಯೆಗೆ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ 100 ರೂ ಶುಲ್ಕವನ್ನು ಪಾವತಿಸಿ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಕೋರಲಾಗಿದೆ (ಮೊಬೈಲ್ ಸಂಖ್ಯೆ : 9008928684). ಗೋಸೇವಾ ಗತಿವಿಧಿ, ಮಂಗಳೂರು ವಿಭಾಗ ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳ ಪುತ್ತೂರು ಘಟಕಗಳು ಈ ಕಾರ್ಯಕ್ರವನ್ನು ಸಂಯೋಜಿಸಿವೆ.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ – ಗೋಸೇವಾ ಗತಿವಿಧಿ, ಗೋ ಉತ್ಪನ್ನ ತಯಾರಿ ಆಯಾಮ ವಿಷಯದ ಪ್ರಾಂತ ಪ್ರಮುಖರಾದ ಉಮೇಶ್ ಕುಲಕರ್ಣಿ, ಡಿ.ಸಿ. ಆರ್ ನ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಎಂ. ಯದುಕುಮಾರ್, ನಿವೃತ್ತ ಉಪನ್ಯಾಸಕ ಹಾಗೂ ಗೋ ಆಧಾರಿತ ಕೃಷಿಕರಾದ ಉದಯಶಂಕರ, ಗೋಉತ್ಪನ್ನಗಳ ತಯಾರಕರಾದ ಕೆ.ಟಿ ವೆಂಕಟೇಶ್, ಸ್ವರ್ಗಸಾರ ಗೋ ಉತ್ಪನ್ನಗಳ ತಯಾರಕರಾದ ಭಾಸ್ಕರ್ ರಾವ್ ಉಬರಡ್ಕ, ಹೈನುಗಾರಿಕಾ ಕೃಷಿಕರಾದ ಜಯಗುರು ಆರ್ಯ ಹಿಂದಾರು ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮುಳಿಯ ಗೋವಿಹಾರದ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.