ಬೆಳ್ತಂಗಡಿ: ಕೆಲದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಳಾಲು ಜೆರಾಲ್ಡ್ ಡಿಸೋಜಾ ರವರ ಪುತ್ರ ಪ್ರಥಮ್ ಡಿಸೋಜಾ ಇಂದು ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಫೆ.21 ರಂದು ಕಾಲೇಜಿಗೆಂದು ಹೇಳಿ ಹೋಗಿದ್ದ ಪ್ರಥಮ್ ಮನೆಗೆ ಬಾರದೆ ನಾಪತ್ತೆಯಾಗಿದ್ದು, ಈ ಬಗ್ಗೆ ಆತನ ತಂದೆ ಜೆರಾಲ್ಡ್ ಡಿಸೋಜಾ ರವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು.
ನಾಪತ್ತೆಯಾದ ಪ್ರಥಮ್ ಇಂದು ಪತ್ತೆಯಾಗಿದ್ದು, ಆತನನ್ನು ಕರೆ ತರಲು ಮನೆಯವರು ಉಡುಪಿಗೆ ತೆರಳಿದ್ದು, ಆತ ಯಾವ ಕಾರಣಕ್ಕಾಗಿ ಮನೆ ಬಿಟ್ಟು ತೆರಳಿದ್ದ ಎಂಬ ಮಾಹಿತಿ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ..