ಮಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಮಂಗಳೂರಿನ ಯೆನೆಪೊಯಾ ಡೀಮ್ಡ್ ಯೂನಿವರ್ಸಿಟಿಗೆ ಒಳಪಟ್ಟ ಬಹುತೇಕ ಮೆಡಿಕಲ್ ಕಾಲೇಜು ವಿಭಾಗಗಳನ್ನು ಮುಚ್ಚಲಾಗಿದೆ. ಯೆನೆಪೊಯಾ ವೈದ್ಯಕೀಯ ಕಾಲೇಜು, ಯೆನೆಪೊಯಾ ಡೆಂಟಲ್ ಕಾಲೇಜು, ಯೆನೆಪೊಯ ನರ್ಸಿಂಗ್ ಕಾಲೇಜು, ಯೆನೆಪೊಯ ಭೌತಚಿಕಿತ್ಸೆಯ ಕಾಲೇಜು, ಯೆನೆಪೊಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರ, ಅಲೈಡ್ ಹೆಲ್ತ್ ಕೇರ್ ಪ್ರೊಫೆಷನಲ್ಸ್ ಫ್ಯಾಕಲ್ಟಿ ಯೆನೆಪೊಯಾ ಆಯುರ್ವೇದ ಕಾಲೇಜು ಯೆನೆಪೊಯ ಹೋಮಿಯೋಪತಿ ಕಾಲೇಜು, ಯೆನೆಪೊಯ ನ್ಯಾಚುರೋಪತಿ ಕಾಲೇಜುಗಳನ್ನು ಮುಚ್ಚುವಂತೆ ಯೆನೆಪೊಯಾ ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಗಂಗಾಧರ್ ಸೋಮಯಾಜಿ ಸೂಚನೆ ನೀಡಿದ್ದಾರೆ.
ಆದರೆ ಪಿ.ಜಿ ಕಲಿಯುವ ವಿದ್ಯಾರ್ಥಿಗಳು ಮತ್ತು ನರ್ಸಿಂಗ್ ಸ್ಟಾಫ್ ಕಾಲೇಜಿಗೆ ಹಾಜರಾಗಲು ಸೂಚಿಸಲಾಗಿದೆ. ಮೆಡಿಕಲ್ ಕಾಲೇಜು ಆಸ್ಪತ್ರೆಯೂ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯೂ ಕರ್ತವ್ಯಕ್ಕೆ ಹಾಜರಾಗಬೇಕು, ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಮುಂದುವರಿಯಲಿದೆಯೇ ಅಥವಾ ಕೊರೊನಾ ಸೋಂಕಿನ ಬಗ್ಗೆಯೂ ರಿಜಿಸ್ಟ್ರಾರ್ ಉಲ್ಲೇಖಿಸಿಲ್ಲ. ಕಾಲೇಜು ಮುಚ್ಚುವುದಾಗಿಯೂ ಹೇಳಿಲ್ಲ. ಮಾಹಿತಿ ಪ್ರಕಾರ ಯೆನೆಪೊಯಾ ಕಾಲೇಜಿನ ಹಾಸ್ಟೆಲ್ ನಲ್ಲಿ 20 ಕ್ಕೂ ಅಧಿಕ ವಿದ್ಯಾರ್ಥಿಗಳು ಕೊರೊನಾ ಸೋಂಕಿಗೊಳಪಟ್ಟಿದ್ದಾರೆ. ಇನ್ನುಳಿದವರಿಗೆ ಸೋಂಕು ಹರಡದಿರಲೆಂದು ಈ ರೀತಿಯ ಕೈಗೊಂಡಿರಬಹುದಾಗಿದೆ.