ಮಂಗಳೂರು: ಹೊರವಲಯದ ತೊಕ್ಕಟ್ಟು ಜಂಕ್ಷನ್ ನಲ್ಲಿ ಬ್ಯಾರಿ ಭವನ ಶಿಲಾನ್ಯಾಸಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಅಬ್ಬಕ್ಕ ಭವನ ವಿಳಂಬ ಹಿನ್ನೆಲೆ ಈ ಶಿಲಾನ್ಯಾಸಕ್ಕೆ ವಿರೋಧ ವ್ಯಕ್ತವಾಗಿದೆ.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಅಭಿಮಾನಿಗಳಿಂದ ಈ ವಿರೋಧ ವ್ಯಕ್ತವಾಗಿದೆ. ಬಿಜೆಪಿ- ಹಿಂದೂ ಸಂಘಟನೆ ಕಾರ್ಯಕರ್ತರು ಶಿಲನ್ಯಾಸಕ್ಕೆ ವಿರೋಧ ತೋರಿದ್ದಾರೆ. ಸ್ಥಳೀಯ ಶಾಸಕ ಯು.ಟಿ. ಖಾದರ್ ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆದಿದೆ.
ಬಿಜೆಪಿ ಸರಕಾರವೇ ಇರುವಾಗ ಬಿಜೆಪಿ ಕಾರ್ಯಕರ್ತರೇ ಸೇರಿಕೊಂಡು ಪ್ರತಿಭಟಿಸುತ್ತಿರುವುದು ಹಾಸ್ಯಾಸ್ಪದ. ಪ್ರತಿಭಟಿಸುವ ಬದಲು, ತಮ್ಮ ಸರಕಾರದ ಮೂಲಕ ಯೋಜನೆಯನ್ನು ನಿಲ್ಲಿಸಬಹುದಲ್ಲವಾ? ಅಂತಾ ಶಾಸಕ ಯು.ಟಿ ಖಾದರ್ ಲೇವಡಿ ಮಾಡಿದ್ದಾರೆ.