ಚಿಕ್ಕಮಗಳೂರು: ಆಟವಾಡುವಾಗ ನೀರಿನ ಟ್ಯಾಂಕ್ಗೆ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಇಂದ್ರಾವತಿ ಎಸ್ಟೇಟ್ನಲ್ಲಿ ಸಂಭವಿಸಿದೆ.
ಗೀತಾ-ಶೇಷಪ್ಪ ದಂಪತಿ ಪುತ್ರಿ ಪ್ರಾರ್ಥನಾ (7) ಸಾವನ್ನಪ್ಪಿದ ಬಾಲಕಿ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದ ಎಸ್ಟೇಟ್ನಲ್ಲಿ ಮಗು ಆಟವಾಡುತ್ತಿದ್ದಾಗ ನೀರಿನ ಟ್ಯಾಂಕ್ಗೆ ಬಿದ್ದಿದೆ. ಪರಿಣಾಮ ನೀರಿನಲ್ಲಿ ಉಸಿರಾಟ ತೊಂದರೆಯಾಗಿ ಕಂದಮ್ಮ ಕೊನೆಯುಸಿರೆಳೆದಿದೆ. ಘಟನೆ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.