ವಿಟ್ಲ: ಲಯನ್ಸ್ ಜಿಲ್ಲೆ 317 ಡಿಯ ‘ಸಾಧನ ಸಂಭ್ರಮ’ ಕಾರ್ಯಕ್ರಮ ಕೊಣಾಜೆಯ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕ್ಲಬ್ ವಿಸ್ತರಣೆಯ ಸಾಧನೆಗಾಗಿ ಲಯನ್ಸ್ ಜಿಲ್ಲಾ ಪ್ರಾಂತೀಯ ಸಲಹೆಗಾರ ಸುದರ್ಶನ್ ಪಡಿಯಾರ್ ಹಾಗೂ ಕ್ಲಬ್ ನ ಅಧ್ಯಕ್ಷ ಸಂದೇಶ್ ಶೆಟ್ಟಿ ಯವರನ್ನು ಜಿಲ್ಲಾ ರಾಜ್ಯಪಾಲರಾದ ವಸಂತ್ ಕುಮಾರ್ ಶೆಟ್ಟಿ ಯವರು ಗೌರವಿಸಿದರು.
ಈ ಸಂದರ್ಭದಲ್ಲಿ ಪ್ರಥಮ ಜಿಲ್ಲಾ ಉಪ ರಾಜ್ಯಪಾಲ ಸಂಜೀತ್ ಶೆಟ್ಟಿ, ದ್ವಿತೀಯ ಉಪ ರಾಜ್ಯಪಾಲ ಮೆಲ್ವಿನ್ ಡಿಸೋಜಾ, ಕ್ಲಬ್ ನ ಸದಸ್ಯ ಹರೀಶ್ ಶೆಟ್ಟಿ, ಧರ್ಣಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.