ಪುತ್ತೂರು: ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮಾ.8 ಮತ್ತು 9 ರಂದು ನಡೆಯಲಿರುವ ವರ್ಷಾವಧಿ ಉತ್ಸವದ ಅಂಗವಾಗಿ ಫೆ.27 ರಂದು ಶ್ರಮದಾನದ ಕಾರ್ಯಕ್ರಮ ನೆರವೇರಿತು.
ಶ್ರೀರಾಮ ಗೆಳೆಯರ ಬಳಗ ಪುತ್ತಿಲ, ಬಿಲ್ಲವ ಸಂಘ ಮುಡ್ನೂರು, ಒಕ್ಕಲಿಗ ಗೌಡ ಸಂಘ ಹಾಗೂ ಉತ್ಸವ ಸಮಿತಿ ಪದಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ಭಕ್ತಾದಿಗಳು ಶ್ರಮದಾನದ ಮೂಲಕ ದೇವಸ್ಥಾನ ಪರಿಸರದ ಸ್ವಚ್ಚತೆ ಹಾಗೂ ಪೂರ್ವಸಿದ್ದತಾ ಕಾರ್ಯಗಳನ್ನು ನಡೆಸಿದರು.