ಪುತ್ತೂರು: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಈಶ್ವರಮಂಗಲದಲ್ಲಿ ವರ್ಷಾವಧಿ ಜಾತ್ರೋತ್ಸವವು ಫೆ.26 ರಿಂದ ಮಾ.7ರ ವರೆಗೆ ನಡೆಯಲಿದೆ.
ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ನಡೆಯಲಿದೆ.
ಫೆ.28 ರಿಂದ ನಿತ್ಯ ಬಲಿ, ಸಂಜೆ ‘ಕಲಾತಾರೆಗಳು ಪುತ್ತೂರು’ ಇವರಿಂದ ನೃತ್ಯ ಸಂಭ್ರಮ ಮತ್ತು ಎಂಕ್ಲು ತುಳುವೆರ್ ಕಲಾಬಳಗ, ಈಶ್ವರಮಂಗಲ ಇವರಿಂದ ‘ಪಂಡ್ ದ್ ತಪ್ಪವಡೆ’ ವಿಭಿನ್ನ ಶೈಲಿಯ ತುಳು ನಾಟಕ ನಡೆಯಲಿದೆ.
ಮಾ.1 ರಂದು ನಿತ್ಯ ಬಲಿ, ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಉತ್ಸವ ಬಲಿ, ಮಹಾಶಿವರಾತ್ರಿ ಮಹೋತ್ಸವ, ಅರ್ಧ ಏಕಾಹ ಭಜನೆ ನಡೆಯಲಿದೆ. ಮಾ.2 ರಂದು ಉತ್ಸವ ಬಲಿ, ಅನ್ನಸಂತರ್ಪಣೆ, ರಾತ್ರಿ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ಮಾ.3 ರಂದು ಉತ್ಸವ ಬಲಿ, ಅನ್ನಸಂತರ್ಪಣೆ, ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ, ನಡು ದೀಪೋತ್ಸವ ನಡೆಯಲಿದೆ. ಮಾ.4 ರಂದು ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಕುತ್ಯಾಳ ಶ್ರೀ ಮಹಾವಿಷ್ಣು ದೇವರ ಸನ್ನಿಧಿಗೆ ಶ್ರೀದೇವರ ಸವಾರಿ, ಕಟ್ಟೆಪೂಜೆ ಮರಳಿ ಬಂದು ಶಯನೋತ್ಸವ ನಡೆಯಲಿದೆ.
ಫೆ.5 ರಂದು ಬೆಳಿಗ್ಗೆ ಕವಟೋದ್ಘಾಟನೆ, ಸೀಯಾಳ ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಉತ್ಸವ ಬಲಿ, ಅವಭೃತ ಸ್ನಾನಕ್ಕೆ ಸಡ್ಘೇಟಿಗೆ ಶ್ರೀದೇವರ ಸವಾರಿ ಕಟ್ಟೆ ಪೂಜೆ ಅವಭೃತ ಸ್ನಾನ ಹಾಗೂ ಯಕ್ಷಗಾನ ಬಯಲಾಟ ನಡೆಯಲಿದೆ.
ಮಾ.6 ರಂದು ಬೇಡಿ ಸೇವೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ,ಧ್ವಜಾವರೋಹಣ, ಮಂತ್ರಾಕ್ಷತೆ, ಸಂಪ್ರೋಕ್ಷಣೆ, ಮಹಾಪೂಜೆ, ರಾತ್ರಿ ಕ್ಷೇತ್ರದ ದೈವಗಳ ಸ್ಥಾನದಿಂದ ದೈವಗಳ ಭಂಡಾರ ಹೊರಟು ಮಾಡದ ಗುಡ್ಡೆ ದೈವಗಳ ಚಾವಡಿಯಲ್ಲಿ ಏರಲಿದೆ. ಮಾ.7 ರಂದು ಶ್ರೀ ಕ್ಷೇತ್ರದಲ್ಲಿ ಕಿನ್ನಿಮಾಣಿ ದೈವ ಶ್ರೀ ಮುಡಿ ಧರಿಸಿ ಹೊರಟು ಮಾಡದ ಗುಡ್ಡೆ ದೈವಗಳ ಚಾವಡಿಯಲ್ಲಿ ಕಿನ್ನಿಮಾಣಿ, ಪೂಮಾಣಿ, ಪಿಲಿಚಾಮಂಡಿ ದೈವಗಳ ನೇಮ ಹಾಗೂ ಅನ್ನಸಂತರ್ಪಣೆ ಹಾಗೂ ಶ್ರೀ ಕ್ಷೇತ್ರದಲ್ಲಿ ಗುಳಿಗ ಕೋಲ ನಡೆಯಲಿದೆ.