ಬಂಟ್ವಾಳ: ಶಾಲಾ ಬಸ್ ಡಿಕ್ಕಿಯಾಗಿ ಮೆಸ್ಕಾಂ ಉದ್ಯೋಗಿಯೋರ್ವ ಮೃತಪಟ್ಟ ಘಟನೆ ಕುದ್ಕೋಳಿ ಎಂಬಲ್ಲಿ ನಡೆದಿದೆ.
ಮೃತರನ್ನು ಮೂಡಬಿದ್ರೆ ಮೂರುಮಾರ್ನಾಡು ನಿವಾಸಿ ಗಣೇಶ್ ಪೂಜಾರಿ ಎನ್ನಲಾಗಿದೆ.
ಗಣೇಶ್ ಮೆಸ್ಕಾಂ ನಲ್ಲಿ ಮೀಟರ್ ರೀಡಿಂಗ್ ಉದ್ಯೊಗಿಯಾಗಿದ್ದು, ಬಂಟ್ವಾಳದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸು ಮನೆಗೆ ಹೋಗುವ ಸಂದರ್ಭದಲ್ಲಿ ಕುದ್ಕೋಳಿ ಎಂಬಲ್ಲಿ ಎದುರಿನಿಂದ ಬಂದ ಶಾಲಾ ಬಸ್ ಬೈಕ್ ಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.