ಪುತ್ತೂರು: ಮುಂಡೂರು ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮಾ.7ರಿಂದ 9ರ ತನಕ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವ, ಧರ್ಮದೈವಗಳ ನೇಮೋತ್ಸವ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಮಾ.6ರಂದು ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ, ಧಾರ್ಮಿಕ ಅಧ್ಯಯನ ಕೇಂದ್ರ ಉದ್ಘಾಟಿಸಿ, ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಜಿಯವರು ಮಾತನಾಡಿ, ಭಕ್ತ ಮತ್ತು ದೇವರು ದೀಪದಂತೆ. ದೀಪ ಉರಿಯಬೇಕಾದರೆ ಎಣ್ಣೆ, ಬತ್ತಿಯ ಆವಶ್ಯಕತೆಯಿರುವಂತೆ ಭಕ್ತನಿಗೆ ದೇವರ ಆವಶ್ಯಕತೆ ಉಲಯಿರುವಂತೆ ಭಗವಂತನಿಗೂ ಭಕ್ತರ ಆವಶ್ಯಕತೆಯಿದೆ.ಸರಕಾರದ ವ್ಯವಸ್ಥೆಯೊಂದಿಗೆ ಕುಕ್ಕಿನಡ್ಕ ದೇವಸ್ಥಾನವು ಸಮಗ್ರ ಅಭಿವೃದ್ಧಿಯಾಗಿದೆ ಎಂದರು. ಜ್ಯೋತಿಷ್ಯದ ದೊಡ್ಡ ದೇವರು ಸುಬ್ರಹ್ಮಣ್ಯ. ಇಲ್ಲಿ ಬಂದು ಪ್ರಾರ್ಥಿಸಿದರೆ ಕಷ್ಟ ದೂರ. ನಾನಾ ಗ್ರಂಥಗಳು ಈ ಕ್ಷೇತ್ರದ ಅಧ್ಯಯನ ಕೇಂದ್ರಗಳಲ್ಲಿದ್ದು ಎಲ್ಲರೂ ಅಧ್ಯಯನ ಮಾಡುವ ಮೂಲಕ ಧರ್ಮದ ಬಗ್ಗೆ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಅರಿತುಕೊಳ್ಳಬೇಕು. ಜೀವನದಲ್ಲಿ ನಾವು ಮಾಡುವ ಉತ್ತಮ ಕೆಲಸಗಳು ಶಾಶ್ವತವಾಗಿರುತ್ತದೆ. ದೇವಸ್ಥಾನದಲ್ಲಿ ಪರಸ್ಪರ ಅನ್ಯೋನ್ಯತೆಯೊಂದಿಗೆ ದೇವಸ್ಥಾನದಲ್ಲಿ ಮುಂದುವರಿಯಬೇಕು ಎಂದು ಸ್ವಾಮೀಜಿಯವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುರಳೀಧರ ಭಟ್ ಬಂಗಾರಡ್ಕ ಮಾತನಾಡಿ, ಧಾರ್ಮಿಕ ಕೇಂದ್ರಗಳ ಪುನರುತ್ಥಾನದ ಮೂಲಕ ದೇಶ ಸುಭೀಕ್ಷೆಯಾಗಿರಲಿದೆ. ದೇವಸ್ಥಾನದ ಜೀರ್ಣೋದ್ಧಾರ ಅಭಿವೃದ್ಧಿ ಕಾರ್ಯಗಳಲ್ಲಿ ಊರವರ ತಿಳಿಸಿದರು ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡುವ ಮೂಲಕ ಧಾರ್ಮಿಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಎಂದ ಅವರು ದೇವಾಲಯದ ಅಭಿವೃದ್ಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ವಿಶೇಷ ಅತಿಥಿಯಾಗಿದ್ದ ಬ್ರಹ್ಮವಾಹಕ ರಾಧಾಕೃಷ್ಣ ಪುತ್ತೂರಾಯ ಮಾತನಾಡಿ, ದೇವಾಲಯ, ವಿದ್ಯಾಲಯ ಅಭಿವೃದ್ಧಿ ಆದಾಗ ಆ ಊರು ಸುಭೀಕ್ಷೆಯಲ್ಲಿರಲಿದೆ. ನಾಯಕತ್ವ ಹೇಗಿರಬೇಕು ಎನ್ನುವುದಕ್ಕೆ ಕುಕ್ಕಿನಡ್ಕ ದೇವಸ್ಥಾನವೇ ಉದಾಹರಣೆಯಾಗಿದೆ. ಉಳಿತಾಯದ ಶೇ.1ನ್ನು ಧಾರ್ಮಿಕ ಕಾರ್ಯಗಳಿಗೆ ಮೀಸಲಿಡಬೇಕು. ಜಾತಿ ವ್ಯವಸ್ಥೆಯಿಂದ ಹೊರಬರಬೇಕು ಎಂದರು.
ಉತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಪ್ರಸ್ತಾವಿಕವಾಗಿ ಮಾತನಾಡಿ, ಬ್ರಹ್ಮಕಲಶದ ನಂತರದ ಆರು ವರ್ಷಗಳಲ್ಲಿ ಮಹತ್ತರವಾದ ಅಭಿವೃದ್ಧಿಯಾಗಿದೆ. ಕುಕ್ಕೆಯಷ್ಟೇ ಪ್ರಧಾನ್ಯತೆ ಹೊಂದಿರುವ ಕುಕ್ಕಿನಡ್ಕ ದೇವಸ್ಥಾನವಾಗಿದ್ದು ಇಲ್ಲಿ ಸೇವೆಗೆ ಪೂರಕವಾದ ಮೂಲಭೂತ ಸೌಲಭ್ಯಗಳನ್ನು ಭಕ್ತಾದಿಗಳಿಗೆ ಒದಗಿಸಲಾಗಿದೆ. ಭಕ್ತರ ಸಹಕಾರದಿಂದ ಶೆ.100ರಷ್ಟು ಕೆಲಸ ಪೂರ್ಣಗೊಂಡಿದೆ. ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಧಾರ್ಮಿಕ ಅಧ್ಯಯನ ಕೇಂದ್ರ, ಗ್ರಾಮದ ಭಕ್ತಾದಿಗಳಿಗೆ ಆವಶ್ಯಕವಾದ ಸಭಾಂಗಣ ಸೇರಿದಂತೆ ಸುಮಾರು ರೂ.50ಲಕ್ಷದ ಕಾಮಗಾರಿಗಳನ್ನು ನಡೆಸಲಾಗಿದೆ ಎಂದರು.
ಮುಂಡೂರು ಮೃತ್ಯುಂಜಯೇಶ್ಚರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಚಂದ್ರ ಕಡ್ಯ, ಉತ್ಸವ ಸಮಿತಿ ಉಪಾಧ್ಯಕ್ಷ ಅನಿಲ್ ಕುಮಾರ್ ಕನ್ನರ್ ನೂಜಿ, ಕಾರ್ಯದರ್ಶಿ ಉಮೇಶ್ ಗುತ್ತಿನಪಾಲು, ವ್ಯವಸ್ಥಾಪನಾ ಸಮಿತಿ ಸದಸ್ಯ ಸದಾಶಿವ ಶೆಟ್ಟಿ ಪಟ್ಟೆ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸೀತಾರಾಮ ಅಂಬಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ಅಭಿವೃದ್ಧಿ ಕಾರ್ಯಗಳಿಗೆ ಪ್ರಮುಖ ಪಾತ್ರವಹಿಸಿದ್ದ, ಗಾರೆ ಕೆಲಸ ನಿರ್ವಹಿಸಿದ ವೆಂಕಪ್ಪ, ಹರೀಶ, ಮೇಲ್ಚಾವಣಿ ಕೆಲಸ ನಿರ್ವಹಿಸಿದ ಹರೀಶ್ ಮತ್ತು ತಂಡ, ಫೈಟಿಂಗ್ ಕೆಲಸ ನಿರ್ವಹಿಸಿದ ಶ್ರೀಧರ ನಾಯ್ಕ ಮತ್ತು ತಂಡ, ಪ್ಲಂಬಿಂಗ್ ಮತ್ತು ವಿದ್ಯುತ್ ಕೆಲಸ ನಿಋವಹಿಸಿದ ಧನಂಜಯ ಕುಲಾಲ್ ಮತ್ತು ತಂಡ, ಇಂಟರ್ ಲಾಕ್ ಅಳವಡಿಸಿದ ಅಸ್ತ ಸಿಮೆಂಟ್ ಪ್ರಾಡಕ್ಟ್ ನ ಮ್ಹಾಲಕ ವಿಕಾಸ್ ರೈ ಉಪ್ಪಳಿಗೆ, ಸ್ಟೀಲ್ ಗೇಟ್ ನಿರ್ಮಿಸಿದ ಜಯಪ್ರಸಾದ್ ಅಂಬಟ, ಶೌಚಾಲಯದ ಗುತ್ತಿಗೆದಾರ ರಾಜ್ ಕುಮಾರ್ ರೈ ಬೆದ್ರಾಳ, ನಿತ್ಯ ಕರಸೇವಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಆರಾಧ್ಯ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯೆ ಭವಾನಿ ರಮೇಶ್ ಗೌಡ ಪಜಿಮಣ್ಣು ದಂಪತಿ ಸ್ವಾಮಿಜಿಯವರಿಗೆ ಫಲಪುಷ್ಪ ನೀಡಿ ಗೌರವಿಸಿದರು. ಉತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀರಂಗ ಶಾಸ್ತ್ರೀ ವಂದಿಸಿದರು. ಉದಯ ಕುಮಾರ್ ರೈ ಸಂಪ್ಯ, ಉಮೇಶ್ ಎಸ್.ಕೆ. ಸಂಪ್ಯ ಕಾರ್ಯಕ್ರಮ ನಿರೂಪಿಸಿದರು.
ಹೊರೆಕಾಣಿಕೆ ಸಮರ್ಪಣೆ:
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿ ಶೆಟ್ಟಿ ನೇಸರ ಕಂಪ ಮನೆಯಲ್ಲಿ ಹಸಿರುವಾಣಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮಿಜಿಯವರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ಮೆರವಣಿಗೆ ಮುಖ್ಯ ರಸ್ತೆಯ ಮೂಲಕ ಸಾಗಿ ದೇವಸ್ಥಾನದಲ್ಲಿ ಸಮಾಫನಗೊಂಡಿತು. ಕುಕ್ಕಿನಡ್ಕ ಶ್ರೀ ಸುಬ್ರಾಯ ಭಜನಾ ಮಂಡಳಿಯವರಿಂದ ಭಜನೆ, ರೆಂಜ ಶ್ರೀಮಣಿಕಂಠ ಸಿಂಗಾರಿ ಮೇಳದವರಿಂದ ಚೆಂಡೆ ವಾದನ ಮೆರವಣಿಗೆಯಲ್ಲಿ ಆಕರ್ಷಿಣಿಯವಾಗಿತ್ತು. ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗಳ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್, ಉತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀರಂಗ ಶಾಸ್ತ್ರಿ ಮಣಿಲ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸದಾಶಿವ ಶೆಟ್ಟಿ ಪಟ್ಟೆ, ರಾಮಣ್ಣ ಗೌಡ ತೌಡಿಂಜ, ದುಗ್ಗಪ್ಪ, ಭವಾನಿ ರಮೇಶ್ ಗೌಡ, ಉತ್ಸವ ಸಮಿತಿ ಕಾರ್ಯದರ್ಶಿ ಉಮೇಶ್ ಗುತ್ತಿನಪಾಲು, ಉಪಾಧ್ಯಕ್ಷ ಅನಿಲ್ ಕುಮಾರ್ ಕನ್ನರ್ ನೂಜಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುರಳೀಧರ ಭಟ್ ಬಂಗಾರಡ್ಕ, ಕಾರ್ಯದರ್ಶಿ ಸೀತಾರಾಮ ಅಂಬಟ, ಸುಧೀರ್ ಶೆಟ್ಟಿ ನೇಸರ ಕಂಪ, ರಮೇಶ ಗೌಡ ಪಜಿಮಣ್ಣು, ಮುಂಡೂರು ಗ್ರಾ.ಪಂ ಸದಸ್ಯ ಬಾಲಕೃಷ್ಣ ಪೂಜಾರಿ, ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶ್ರೀಕಾಂತ್ ಆಚಾರ್ ಹಿಂದಾರ್, ನಿರ್ದೇಶಕ ಜಯಾನಂದ ಆಳ್ವ ಪಟ್ಟೆ, ಉದಯ ಗೌಡ ಪಜಿಮಣ್ಣು ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.