ಕರ್ನಾಟಕ ರಾಜ್ಯದಲ್ಲಿರುವ ಜೇನು ಕೃಷಿಕರಿಗೆ ಹಾಗೂ ಜೇನು ಸಾಕಣೆ ರೈತರಿಗೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ವಿಶೇಷವಾದ ಸಿಹಿ ಸುದ್ದಿ ಹೊರ ತಂದಿದೆ.
ಜೇನು ಪೆಟ್ಟಿಗೆಯಲ್ಲಿರುವ ಜೇನು ಹುಳಗಳ ಜೊತೆಗೆ ವಾಸಿಸುವ ಹಾಗೂ ಜೇನು ಅಂಟನ್ನು ತಿಂದು ಬದುಕುವ ಬಿಳಿ ರೂಪದ ಕೆಂಪು ಮೂತಿಯ ಹುಳಗಳನ್ನು ದಕ್ಷಿಣ ಕನ್ನಡ ತೆಂಗು ಸಂಸ್ಥೆ ಖರೀದಿಸಲು ಮುಂದಾಗಿದೆ. ಒಂದು ಹುಳಕ್ಕೆ 2 ರೂ. ಅಂತೆ ರೈತರಿಂದ ಖರೀದಿಸಲಾಗುವುದು ಈ ಬಿಳಿ ಹುಳಗಳನ್ನು ಜೇನು ಪೆಟ್ಟಿಗೆಯಿಂದ ಬೇರ್ಪಡಿಸುವುದರಿಂದ ಜೇನು ಕೃಷಿಯಲ್ಲಿ ಉತ್ತಮ ಆದಾಯವನ್ನು ಪಡೆದುಕೊಳ್ಳಬಹುದು ಎಂದು ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಕಂಪನಿ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 7338567763 ಅನ್ನು ಸಂಪರ್ಕಿಸಬಹುದಾಗಿದೆ.