ಉಳ್ಳಾಲ: ಮಗಳ ಐದನೇ ವರ್ಷದ ಜನ್ಮ ದಿನವನ್ನುಅದ್ದೂರಿಯಾಗಿ ಆಚರಿಸಬೇಕೆಂದು ಕನಸು ಕಂಡಿದ್ದ ತಂದೆ, ಹುಟ್ಟುಹಬ್ಬಕ್ಕೆ ವಾರವಿರುವಾಗಲೇ ಆತ್ಮಹತ್ಯೆಗೆ ಶರಣಾದ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕೊಲ್ಯ ಕಣೀರು ತೋಟದ ಕಣೀರುಬೀಡುವಿನ ಪ್ರವೀಣ್ ಪೂಜಾರಿ (34) ಎನ್ನಲಾಗಿದೆ.
ಪ್ರವೀಣ್ ಖಾಸಗಿ ಬಸ್ ನಲ್ಲಿ ಚೆಕ್ಕರ್ ಆಗಿ ಕತೃವ್ಯ ನಿರ್ವಹಿಸುತ್ತಿದ್ದರು. ಸೋಮವಾರ ಸಂಜೆ ಮನೆಗೆ ಬಂದವರು ಕೋಣೆಯೊಳಗೆ ತೆರಳಿದ್ದರು.
ಸಂಜೆ ಪತ್ನಿ ಕೆಲಸದಿಂದ ಮರಳಿದಾಗ ಪಕ್ಕಾಸಿಗೆ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತತ್ ಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ಅದಾಗಲೇ ಅವರು ಮೃತಪಟ್ಟಿದ್ದರು.
ಮುಂದಿನ ವಾರ ಮಗಳ ಐದನೇ ವರ್ಷದ ಹುಟ್ಟುಹಬ್ಬವಿದ್ದು, ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಬೇಕೆಂದು ಮನೆಯಲ್ಲಿ ಹೇಳುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




























