ಮಂಗಳೂರು: ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣ ಹಾಗೂ ಈ ಹಿಂದೆ ಹಾಕಿರುವ ಅನೇಕ ಆಕ್ಷೇಪಾರ್ಹ ಬರಹ ಪೋಸ್ಟ್ ಹಾಕಿರುವ ‘ಮಂಗ್ಳೂರು ಮುಸ್ಲಿಂ’ ಹೆಸರಿನ ಪೇಸ್ ಬುಕ್ ಖಾತೆಯನ್ನು ಅರಬ್ ರಾಷ್ಟ್ರದಲ್ಲಿ ಕುಳಿತು ನಿರ್ವಹಣೆ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ ಪ್ರಕರಣದ ಸಮಗ್ರ ತನಿಖೆಯನ್ನು ಕರ್ನಾಟಕ ಅಪರಾಧ ತನಿಖಾ ವಿಭಾಗ (ಸಿಐಡಿ ) ವಹಿಸಿಕೊಂಡಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ..
‘ಮಂಗ್ಳೂರು ಮುಸ್ಲಿಂ ಪೇಜ್’ ನ್ನು ಅರಬ್ ರಾಷ್ಟ್ರದಲ್ಲಿ ಕುಳಿತು ನಿರ್ವಹಣೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ. ಪ್ರಸ್ತುತ ಈ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದ್ದು, ರಾಜ್ಯ ಇಂಟೆಲಿಜೆನ್ಸ್ ಸೇರಿದಂತೆ ಬೇರೆ ತನಿಖಾ ತಂಡಗಳು ಈ ಬಗ್ಗೆ ತನಿಖೆ ನಡೆಸುತ್ತಿವೆ.
‘ಮಂಗ್ಳೂರು ಮುಸ್ಲಿಂ ಪೇಜ್’ ಅನ್ನು ನಿರ್ವಹಣೆ ಮಾಡುತ್ತಿರುವ ಅಡ್ಮಿನ್ ಒಂದೇ ಸ್ಥಳದಲ್ಲಿ ನಿಲ್ಲದೇ ಬೇರೆ ಬೇರೆ ಸ್ಥಳಗಳಿಗೆ ಪಲಾಯನ ಮಾಡುತ್ತಿರುವುದು. ಆತನನ್ನು ಪತ್ತೆ ಹಚ್ಚಲು ಹಿನ್ನಡೆಯಾಗಿದೆ. 2016ರಲ್ಲಿ ಕಟೀಲು ಶ್ರೀದೇವಿಯ ಅವಹೇಳನ ಹಾಗೂ ಹಿಂದೂ ಧಾರ್ಮಿಕ ನಿಂದನೆಗೆ ಸಂಬಂಧಪಟ್ಟಂತೆ ‘ಮಂಗಳೂರು ಮುಸ್ಲಿಂ’ ಪೇಜ್ ವಿರುದ್ಧ ಮಂಗಳೂರು ಮತ್ತು ಬೆಂಗಳೂರಿನಲ್ಲಿ 2016ರಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಗೆ ಮಂಗಳೂರು ಪೊಲೀಸರು ಮುಂಬಯಿಯಲ್ಲಿರುವ ಫೇಸ್‌ಬುಕ್ ಕಚೇರಿಗೆ ತೆರಳಿ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು. ಇದಾದ ಬಳಿಕ ನ್ಯಾಯಾಲಯದ ಅನುಮತಿ ಪಡೆದು ಆ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು. ಆಗ ‘ಮಂಗಳೂರು ಮುಸ್ಲಿಂ’ ಈಗ ‘ಮಂಗ್ಳೂರ್ ಮುಸ್ಲಿಂ’ 2016ರ ಪ್ರಕರಣದಲ್ಲಿ ‘ಮಂಗಳೂರು ಮುಸ್ಲಿಂ’ ಫೇಸ್‌ಬುಕ್ ಪೇಜ್ ಇದ್ದರೆ ಈಗ ಆ ಹೆಸರು ಬದಲಾಯಿಸಿ ‘ಮಂಗ್ಳೂರ್ ಮುಸ್ಲಿಂ’ ಎಂದು ಹಾಕಲಾಗಿದೆ. ಕೇವಲ ಒಂದು ಅಕ್ಷರ ಬದಲಾಯಿಸಿ ಹೊಸ ಪೇಜ್ ರೂಪಿಸಲಾಗಿದೆ. ಈ ಫೇಸ್‌ಬುಕ್ ಪೇಜ್ ಲೈಕ್ ಮಾಡಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.