ವಿಟ್ಲ: ದಯಾ ಕ್ರಿಯೇಷನ್ ಅರ್ಪಿಸುವ ವಿಟ್ಲ ಪಂಚಲಿಂಗೇಶ್ವರ ದೇವರ ತುಳು ಭಕ್ತಿ ಗೀತೆ “ಸಿಮಗುಡ್ಡೆದ ಅರಸು” ತುಳು ಭಕ್ತಿ ವಿಡಿಯೋ ಸಾಂಗ್ ನ ಪೋಸ್ಟರ್ ಕೃಷ್ಣಯ್ಯ ಕೆ ವಿಟ್ಲ ಅರಮನೆ ಇವರ ಶುಭ ಆಶೀರ್ವಾದದಲ್ಲಿ ಬಿಡುಗಡೆಗೊಂಡಿತು.
ಸಿಮಗುಡ್ಡೆದ ಅರಸು ಈ ತುಳು ಭಕ್ತಿ ಗೀತೆ ಗೆ ದಿನೇಶ್ ಕೂಡವೂರು ಸಾಹಿತ್ಯ ಬರೆದಿದ್ದಾರೆ. ತನುಷ ಎಸ್ ಕುಂದರ್ ಬ್ರಹ್ಮಾವರ ಗಾಯನದಲ್ಲಿ ಮೂಡಿಬರಲಿರುವ ಈ ಭಕ್ತಿ ಗೀತೆಯ ನಿರ್ಮಾಣ ಚರಣ್ ಪೂಜಾರಿ, ಪುಣಚ ಮನೋಜ್ ಕುಮಾರ್ ಹಾಗೂ ಸಲಹೆ ಸಹಕಾರ ರಾಜೇಶ್ ವಿಟ್ಲ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಆರ್ ಕೆ ಕಲಾ ಸಂಸ್ಥೆಗಳ ನಿರ್ದೇಶಕರು, ದಯಾನಂದ ಅಮೀನ್ ಬಾಯರ್, ಗಂಗಾಧರ್ ವಿಟ್ಲ ಮತ್ತು ನೃತ್ಯ ಸಂಯೋಜನೆ ಕಿರಣ್ ಉಳ್ಳಾಲ್ ನೀಡಿದ್ದಾರೆ.
ಛಾಯಾಗ್ರಾಹನ ಸುಭಾಷ್ ನೀಡಿದ್ದಾರೆ. ಈ ವಿಡಿಯೋ ಸಾಂಗ್ ಮಾ.14 ರಂದು ವಿಟ್ಲ ಪಂಚಲಿಗೇಶ್ವರ ದೇವಸ್ಥಾನದಲ್ಲಿ lಬಿಡುಗಡೆಗೊಳ್ಳಲಿದೆ.