ಉಡುಪಿ: ಮಲ್ಪೆ ಬಂದರಿನಲ್ಲಿ ಬೃಹತ್ ಗಾತ್ರದ ಮೀನು ಪತ್ತೆಯಾಗಿದೆ. ಸೀ ಕ್ಯಾಪ್ಟನ್ ಎಂಬ ಲೈಲ್ಯಾಂಡ್ ಬೋಟಿನವರು ಬೀಸಿದ ಬಲೆಯಲ್ಲಿ ಈ ಮೀನು ಸಿಕ್ಕಿಬಿದ್ದಿದ್ದು, ಸ್ಥಳೀಯ ಭಾಷೆಯಲ್ಲಿ ಗರಗಸ ಮೀನು ಎಂದು ಕರೆಯಲಾಗುವ ಇದಕ್ಕೆ ಗರಗಸ ಶಾರ್ಕ್ ಅಂತಲೂ ಹೇಳುತ್ತಾರೆ.
ಈ ಮೀನು 10ಅಡಿಗೂ ಅಧಿಕ ಉದ್ದವಿದ್ದು, ಬಾಯಿಂದ ಗರಗಸ ಮಾದರಿಯ, ಮೊನಚಾದ ಹಲ್ಲುಗಳು ಹೊರಬಂದಿವೆ. ಕ್ರೇನ್ ಮೂಲಕ ಎತ್ತಿ, ಸದ್ಯ ಈ ಮೀನಿನ ವಿಲೇವಾರಿ ಮಾಡಲಾಗಿದೆ. ಈ ತಳಿಯ ಮೀನುಗಳು ಅಪಾಯದ ಅಂಚಿನಲ್ಲಿವೆ.
ಗಾತ್ರ ಮಾತ್ರವಲ್ಲ ನೋಡಲು ಕೂಡ ಭಯಾನಕವಾಗಿ ಕಾಣುವ ಈ ಮೀನು ಬಂದರಿನಲ್ಲಿ ನೆರೆದಿದ್ದ ಮೀನುಗಾರರ ಅಚ್ಚರಿಗೆ ಕಾರಣವಾಗಿದೆ. ಕ್ರೈನ್ ಮೂಲಕ ಎತ್ತಿ, ಸದ್ಯ ಈ ಮೀನಿನ ವಿಲೇವಾರಿ ಮಾಡಲಾಗಿದೆ. ಅಪಾಯದ ಅಂಚಿನಲ್ಲಿರುವ ಈ ಮೀನನ್ನು, ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳ ಅನುಸಾರ ಅನುಬಂಧ 1ರಲ್ಲಿ ಗುರುತಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.