ಪುತ್ತೂರು: ಯುವಮೋರ್ಚಾ ಕಾರ್ಯಕರ್ತ ಹಾಗೂ ಪಂಚಾಯತ್ ಸದಸ್ಯ ಚಂದ್ರಹಾಸ ಈಶ್ವರಮಂಗಲ ರವರಿಗೆ ಜೀವ ಬೆದರಿಕೆ ಹಾಕಿದವರನ್ನು ಕೂಡಲೇ ಬಂಧಿಸಬೇಕು ಎಂದು ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್ ರವರು ಆಗ್ರಹಿಸಿದ್ದಾರೆ.
ದೀನದಲಿತರಿಗೆ,ಶೋಷಿತ,ಪೀಡಿತರಿಗೆ ತಮ್ಮಿಂದಾದ ಕೆಲಸ ಮಾಡುವ ಯುವ ನಾಯಕನಿಗೆ ಇಂತಹ ದೂರವಾಣಿ ಮೂಲಕ ಹೆದರಿಸುವುದರಿಂದ ಅವರನ್ನು ಸಮಾಜಮುಖಿ ಕೆಲಸದಿಂದ ವಿಚಲಿತರನ್ನಾಗಿ ಮಾಡುವ ಷಡ್ಯಂತ್ರ ಫಲಿಸದು, ಈ ರೀತಿಯ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಅವರು ಹೇಳಿದರು..