ಪುತ್ತೂರು: ಬಸ್ ನಿಲ್ದಾಣದ ಬಳಿಯಲ್ಲಿರುವ ಅಕ್ವೇರಿಯಂ ಅಂಗಡಿಯಲ್ಲಿ ಕೆಲಸಕ್ಕಿದ್ದ ಸಾಲ್ಮರ ನಿವಾಸಿ ಸುಲೈಮಾನ್ ಯಾನೆ ಆಶೀಪ್ ನಾಪತ್ತೆಯಾಗಿರುವ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ತಾರಿಗುಡ್ಡೆ ಇಬ್ರಾಹಿಂರವರ ಪುತ್ರ ಸುಲೈಮಾನ್ ಯಾನೆ ಆಶೀಪ್(27) ನಾಪತ್ತೆಯಾದ ಯುವಕನಾಗಿದ್ದಾನೆ.
ಸುಲೈಮಾನ್ ಅಕ್ವೇರಿಯಂ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ. ಮಾ.7 ರಂದು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದಾರೆ. ಬಳಿಕ ಮನೆ ವಾಪಸ್ ಆಗಿಲ್ಲ. ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದಾಗಲೂ ಆತ ಪತ್ತೆಯಾಗಿಲ್ಲ ಎಂದು ತಾಯಿ ಹಾಜಿರಾರವರು ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.