ಸುಳ್ಯ: ಆನೆ ದಾಳಿ ನಡೆಸಿ ಯುವಕನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಕೊಲ್ಲಮೊಗ್ರ ಗ್ರಾಮದ ಕೋನಡ್ಕ ಎಂಬಲ್ಲಿ ನಡೆದಿದೆ.
ಕೋನಡ್ಕದ ಗುರುಪ್ರಸಾದ್ ಎಂಬ ಯುವಕ ಇಂದು ಮುಂಜಾನೆ 7 ಗಂಟೆಗೆ ಮನೆಯಿಂದ ಹಾಲು ತೆಗೆದುಕೊಂಡು ಬರುತ್ತಿರುವಾಗ ತೋಟದಿಂದ ಗುಡ್ಡಕ್ಕೆ ಹತ್ತಿ ಹೋಗುತ್ತಿದ್ದ ಆನೆ ಎದುರಾಗಿ ಈತನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.
ಘಟನೆಯಿಂದ ತೀವ್ರ ಗಾಯಗೊಂಡಿರುವ ಗುರುಪ್ರಸಾದ್ ರನ್ನು ಸ್ಥಳೀಯರು ಮತ್ತು ಮನೆಯವರು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.