ಬಂಟ್ವಾಳ: ಯುವಶಕ್ತಿ ಸೇವಾಪಥದ ವತಿಯಿಂದ ಶಿವಸನ್ನಿಧಿಗಳಲ್ಲಿ ಸೇವಾಸಂಗಮ ಹಲವು ಸಂಘಟನೆಗಳ ಆಶ್ರಯದಲ್ಲಿ ನೆರವೇರಿದ್ದು, ಉಪ್ಪಿನಂಗಡಿ ಕಡೆ ಮಖೆಯಲ್ಲಿ ವಿಶೇಷ ವೇಷ ಧರಿಸಿ ಸಂಗಮ ಕ್ಷೇತ್ರದಲ್ಲಿ ಸೇವಾಸಂಗಮ ಎಂಬ ಯೋಜನೆಯಡಿ ವಿಶೇಷ ಬೃಹತ್ ವೇಷ ಧರಿಸಿ ದಾನಿಗಳಿಂದ 1,20,000(ಒಂದು ಲಕ್ಷದ ಇಪ್ಪತ್ತು ಸಾವಿರ) ಮೊತ್ತ ಸಂಗ್ರಹಿಸಿ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಧರ್ಮಸ್ಥಳದ ಬೇಬಿ, ದೀಪಾ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹೆಚ್ವಿನ ಚಿಕಿತ್ಸೆಗಾಗಿ ಉಪ್ಪಿನಂಗಡಿಯ ಯಕ್ಷ ಎಂಬ ಮಕ್ಕಳಿಗೆ ಸಹಸ್ರಲಿಂಗೇಶ್ವರ ಕ್ಷೇತ್ರದಲ್ಲಿ ವ್ಯವಸ್ಥಾಪನಾ ಸಮಿತಿಯ ಪ್ರಮುಖರ ಸಮಕ್ಷಮದಲ್ಲಿ ತಲಾ 60000 ಮೊತ್ತ ಹಸ್ತಾಂತರಿಸಲಾಯಿತು.
ಉಪ್ಪಿನಂಗಡಿ ಯೋಜನೆಯಲ್ಲಿ ಟೀಂ ಎಸ್ ವಿ ಕೆ ಉಪ್ಪಿನಂಗಡಿ, ಸೇವಾಜಾಗರಣ ಉಪ್ಪಿನಂಗಡಿ, ಯುವಸ್ಪಂದನ ಪೆರ್ನೆ, ಯುವಕೇಸರಿ ಗಡಿಯಾರ, ಯುವಶಕ್ತಿ ಕಡೇಶಿವಾಲಯ(ರಿ), ಯುವಸ್ಪಂದನ ಟ್ರಸ್ಟ್(ರಿ) ನೆಲ್ಯಾಡಿ,ಶ್ರೀಶಾರದಾ ಫ್ರೆಂಡ್ಸ್ ಸರ್ಕಲ್(ರಿ) ಸಜಿಪ,ಸತ್ಯದೇವತಾ ಯುವಕಸಂಘ ಕಂಚಿಲ ಸಜಿಪ,ಟೀಂ ಕಳೆಂಜ ಗ್ರಾಮಸ್ಥರು, ಹಾಗೂ ಇನ್ನಿತರರ ಸಹಯೋಗವಿದ್ದು ಟೀಂ ಎಸ್ ಆರ್ ಕೆ ನಾಸಿಕ್ ವಾದನದ ಮೂಲಕ ಮೆರುಗು ನೀಡಿತ್ತು.
ಅದೇ ರೀತಿ ಕಾರಿಂಜ ಕ್ಷೇತ್ರದಲ್ಲಿ ರುದ್ರಗಿರಿಯ ಸೇವಾಸಿರಿ ಎಂಬ ಹೆಸರಿನಡಿಯಲ್ಲಿ ಶಿವಪಾರ್ವತಿ ಭೇಟಿ ಉತ್ಸವದಂದು ಸಂಗ್ರಹಿಸಲ್ಪಟ್ಟ 80,000 ಮೊತ್ತದಲ್ಲಿ ಅರುವತ್ತು ಸಾವಿರ ರೂ.ಗಳನ್ನು ರಕ್ತದದೊತ್ತಡದಿಂದ ಬಿದ್ದು ತಲೆಗೆ ಗಾಯವಾಗಿ ಆಸ್ಪತ್ರೆಯಲ್ಲಿರುವ ವಿಜಯ ಆಚಾರ್ಯ ರವರ ತುರ್ತು ಚಿಕಿತ್ಸೆಗಾಗಿ ಕಾರಿಂಜ ಸನ್ನಿಧಿಯಲ್ಲಿ ಹಸ್ತಾಂತರಿಸಲಾಯಿತು.
ಈ ಯೋಜನೆಯಲ್ಲಿ ಗೆಳೆಯರ ಬಳಗ ಆರಿಕಲ್ಲು,ಶಿವಛತ್ರಪತಿ ಫ್ರೆಂಡ್ಸ್ ಬಡೆಕೊಟ್ಟು,ಅಯೋಧ್ಯಾ ಫ್ರೆಂಡ್ಸ್ ಬಿ.ಸಿ ರೋಡ್,ರಾಮ್ ಫ್ರೆಂಡ್ಸ್ ರಿ ಕಟೀಲ್,ದುರ್ಗಾ ಸೇವಾ ಬಳಗ ಅಮ್ಟಾಡಿ ಸಾಥ್ ನೀಡಿದ್ದು, ಕೆ.ಎಫ್.ಎಮ್ ನಾಸಿಕ್ ವಾದನದ ಮೂಲಕ ಸಹಕರಿಸಿದ್ದರು.