ವಿಟ್ಲ: ಪಡಿಬಾಗಿಲು ಶಾಲೆಯ ನೂತನ ಪ್ರವೇಶ ದ್ವಾರ ಮತ್ತು ಶೌಚಾಲಯ ಉದ್ಘಾಟನೆ ಕಾರ್ಯಕ್ರಮ ಮಾ.14 ರಂದು ನಡೆಯಿತು.
ಶಾಲೆಯ ಎಸ್. ಡಿ.ಎಂ.ಸಿ. ಅಧ್ಯಕ್ಷರಾದ ಬಾಲಕೃಷ್ಣ ಕಾರಂತ ಮತ್ತು ಅವರ ಸಹೋದರ ರವಿಶಂಕರ್ ಕಾರಂತರವರು ತಮ್ಮ ಮಾತೃಶ್ರೀ ದಿ. ಕಸ್ತೂರಿ ಕಾರಂತ್ ರವರ ಸ್ಮರಣಾರ್ಥವಾಗಿ ನೀಡಿದ ನೂತನ ಪ್ರವೇಶದ್ವಾರ ಮತ್ತು ಜಿ.ಪಂ. ಶಾಸನ ಬದ್ಧ ಅನುದಾನದಲ್ಲಿ ನೂತನವಾಗಿ ನಿರ್ಮಿಸಿದ ಶೌಚಾಲಯದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ಯಶಸ್ವಿನಿ ಶಾಸ್ತ್ರಿ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಗಜ್ಜಿವನ್ ರಾಮ್ ಗ್ರಾಮ ಪಂಚಾಯತ್ ಸದಸ್ಯರು ಕೇಪು, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ,ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಬಾಲಕೃಷ್ಣ ಕಾರಂತ, ಪ್ರಭಾಕರ ಶೆಟ್ಟಿ ದಂಬೆಕಾನ, ಜಿನಚಂದ್ರ ಜೈನ್, ಲಿಂಗಪ್ಪ ಗೌಡ, ತಾರಾನಾಥ ಆಳ್ವ, ಸೀತಾರಾಮ ಶೆಟ್ಟಿ, ಪದ್ಮಾವತಿ, ಪುಷ್ಪಾವತಿ ವೈ ಸಿ. ಆರ್.ಪಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಎಸ್. ಡಿ. ಎಂ. ಸಿ. ಸದಸ್ಯರು, ವಿದ್ಯಾಸಿರಿ ಶಿಕ್ಷಣ ಕೇಂದ್ರದ ಪದಾಧಿಕಾರಿಗಳು, ರಜತ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಮಕ್ಕಳ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಹೈದರಾಬಾದ್ ನಲ್ಲಿ ನಡೆದ ಕರಾಟೆ ಸ್ಪರ್ಧೆ ಯಲ್ಲಿ ಕಂಚಿನ ಪದಕವನ್ನು ಗಳಿಸಿದ ಶಾಲಾ ವಿದ್ಯಾರ್ಥಿ ಲಿತೇಶ್. ಬಿ ಮತ್ತು ಶೌಚಾಲಯವನ್ನು ಕ್ಲಪ್ತ ಸಮಯದಲ್ಲಿ ಸುಂದರವಾಗಿ ನಿರ್ಮಿಸಿದ ಕಾಂಟ್ರಾಕ್ಟರ್ ಎಸ್. ನಾರಾಯಣ್ ರವರನ್ನು ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿನಿಯರಾದ ಧನ್ವಿತಾ ಕಾರಂತ ಮತ್ತು ಧನುಶ್ರೀ ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ. ಎನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹ ಶಿಕ್ಷಕಿ ಸುಜಾತಾ ಕೆ. ರೈ ಸ್ವಾಗತಿಸಿದರು. ಸಹ ಶಿಕ್ಷಕಿ ಮಲ್ಲಿಕಾ ಕೆ.ಎಸ್. ಧನ್ಯವಾದ ಸಲ್ಲಿಸಿದರು. ಪುಷ್ಪಾವತಿ ಎಮ್ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕರು ಸಹಕರಿಸಿದರು.