ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ತುಳು ಭಕ್ತಿಗೀತೆ ‘ಸಿಮಗುಡ್ಡೆದ ಅರಸು’ ಎಂಬ ಭಕ್ತಿಗೀತೆಯನ್ನು ಕೃಷ್ಣಯ್ಯ ಕೆ ವಿಟ್ಲ ಅರಮನೆ ರವರು ಬಿಡುಗಡೆಗೊಳಿಸಿದರು.
ನಂತರ ಅವರು ಮಾತನಾಡಿ, ಭಕ್ತಿ ಗೀತೆ ಬಿಡುಗಡೆಯಾಗುವಲ್ಲಿ ಇದಕ್ಕೆ ಶ್ರಮಿಸಿದ, ಗಾಯಕಿ ತನುಷ ಕುಂದರ್ ಬ್ರಹ್ಮವರ ,ಸಾಹಿತ್ಯ ಬರೆದ ದಿನೇಶ್ ಕೂಡವೂರು , ದಯಾ ಕ್ರಿಯೇಷನ್ ನ ಸ್ಥಾಪಕರಾದ ದಯಾನಂದ್ ಅಮೀನ್ ಬಾಯಾರು, ಸಹಕರಿಸಿದ ಎಲ್ಲರಿಗೂ ಕ್ಷೇತ್ರದ ಪರವಾಗಿ ಅಭಿನಂದನೆಗಳು. ಇನ್ನು ಮುಂದೆಯೂ ಕಲಾಮಾತೆಯ ಸೇವೆ ಮಾಡುವ ಭಾಗ್ಯ ಕರುಣಿಸಲಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆರ್ ಕೆ ಕಲಾ ಸಂಸ್ಥೆಗಳ ನಿರ್ದೇಶರಾದ ರಾಜೇಶ್ ವಿಟ್ಲ, ಪಾಶ್ವನಾಥ ನೆಲ್ಯಾಡಿ. ಜಯರಾಮ ಬಲ್ಲಾಳ್ .ದಯಾನಂದ ಅಮೀನ್ ಬಾಯಾರು. ಗಾಯಕಿ ತನುಷ ಕುಂದರ್ ಬ್ರಹ್ಮವರ. ಶ್ಯಾಮ್, ಮಮತಾ ಎಸ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.