ರಾಯಚೂರು: ರಾಬರ್ಟ್’ ಸಿನಿಮಾದ ಯಶಸ್ವಿ ಪ್ರದರ್ಶನದ ಖುಷಿಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂತ್ರಾಲಯದ ಗುರು ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ್ದಾರೆ. ಮನಸ್ಸಿಗೆ ಸಮಾಧಾನಕ್ಕಾಗಿ ರಾಯರ ದರ್ಶನ ಪಡೆದಿರುವುದಾಗಿ ಹೇಳಿರುವ ದರ್ಶನ್, ಇದೇ ಸಂದರ್ಭ ರಾಯರ ಸನ್ನಿಧಾನದ ಗೋಶಾಲೆಯಲ್ಲಿ ಕೆಲ ಹೊತ್ತು ಕಾಲ ಕಳೆದಿದ್ದಾರೆ.
ಪ್ರಾಣಿ- ಪಕ್ಷಿಗಳನ್ನ ಬಹಳ ಇಷ್ಟ ಪಡುವ ದರ್ಶನ್, ರಾಯರ ಸನ್ನಿಧಾನದ ಹಸು-ಕರುಗಳ ಜೊತೆ ಹೆಚ್ಚಿನ ಸಮಯ ಕಳೆದು ಸಂತೋಷ ಪಟ್ಟಿದ್ದಾರೆ. ರಾಯರ ಮಠದಲ್ಲಿ ನಡೆದ ವಿಶೇಷ ಸಮಾರಂಭದಲ್ಲೂ ದರ್ಶನ್ ಭಾಗಿಯಾಗಿದ್ದರು.