ರಾಮಕುಂಜ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಗೋಳಿತ್ತಡಿ ಜಂಕ್ಷನ್‌ನಲ್ಲಿ ಮಾ.14ರಂದು ರಾತ್ರಿ ನಡೆದಿದೆ.
ಪೆರಿಯಡ್ಕ ಸಮೀಪದ ಓಡ್ಲದಲ್ಲಿ ತೋಟದ ಕೆಲಸ ನಿರ್ವಹಿಸುತ್ತಿದ್ದ ದಾವಣಗೆರೆ ನಿವಾಸಿ ರಾಜು ಎಂಬವರು ತನ್ನ ಬೈಕ್‌ನಲ್ಲಿ ಗೋಳಿತ್ತಡಿಗೆ ಬರುತ್ತಿದ್ದ ವೇಳೆ ಆಲಂಕಾರು ಕಡೆಯಿಂದ ಉಪ್ಪಿನಂಗಡಿಗೆ ಹೋಗುತ್ತಿದ್ದ ಬೈಕ್ ನಡುವೆ ಗೋಳಿತ್ತಡಿ ಜಂಕ್ಷನ್‌ನಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಅಪಘಾತದಲ್ಲಿ ದಾವಣಗೆರೆ ನಿವಾಸಿ ರಾಜು ಎಂಬವರು ಗಾಯಗೊಂಡಿದ್ದು ಸ್ಥಳೀಯರ ಸಹಕಾರದೊಂದಿಗೆ ಆಂಬುಲೆನ್ಸ್‌ನಲ್ಲಿ ಪುತ್ತೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದ್ದು, ಇನ್ನೊಂದು ಬೈಕ್‌ನಲ್ಲಿದ್ದ ಸವಾರ ಹಾಗೂ ಸಹ ಸವಾರ ಗಾಯಗೊಂಡಿದ್ದು ಅವರನ್ನೂ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.




























